ನವದೆಹಲಿ/ಸೂರತ್:ಹಿಂದಿ ಭಾಷೆಯು ಭಾರತಕ್ಕೆ ಜಾಗತಿಕವಾಗಿ ವಿಶೇಷ ಗೌರವ ತಂದಿದೆ. ಈ ಭಾಷೆಯಲ್ಲಿರುವ ಸರಳತೆ ಮತ್ತು ಸಂವೇದನೆಯು ಯಾವಾಗಲೂ ಜನರನ್ನು ಸೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿಪ್ರಾಯಪಟ್ಟರು.

ಹಿಂದಿ ದಿನಾಚರಣೆ ಪ್ರಯುಕ್ತ ಬುಧವಾರ ಅವರು,ಅತಿದೊಡ್ಡ ಸಂಖ್ಯೆಯ ಜನರು ಮಾತನಾಡುವ ಈ ಭಾಷೆಯನ್ನು ಬಲಪಡಿಸಲು ಮತ್ತು ಶ್ರೀಮಂತಗೊಳಿಸಲು ದಣಿವರಿಯದ ಪ್ರಯತ್ನ ಮಾಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಎಂದುಟ್ವೀಟ್ ಮಾಡಿದ್ದಾರೆ.

ಹಿಂದಿ ಎಲ್ಲ ಭಾಷೆಗಳ ಮಿತ್ರ:‘ಹಿಂದಿ ಪ್ರತಿ ಸ್ಪರ್ಧಿ ಭಾಷೆಯಲ್ಲ, ಬದಲಾಗಿ ದೇಶದ ಎಲ್ಲ ಭಾಷೆಗಳ ಮಿತ್ರನಾಗಿದೆ. ಎಲ್ಲ ಭಾಷೆಗಳು ತಮ್ಮ ಬೆಳವಣಿಗೆಯಲ್ಲಿ ಪರಸ್ಪರ ಅವಲಂಬಿತವಾಗಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಸೂರತ್ ನಗರದಲ್ಲಿ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು,‘ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಸ್ಪರ್ಧಿಗಳು ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ.ಪ್ರಾದೇಶಿಕ ಭಾಷೆಗಳ ವಿರುದ್ಧ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎನ್ನುವ ಅಪಪ್ರಚಾರ ಖಂಡನೀಯ. ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ.ಹಿಂದಿ ಭಾಷೆಯು ಬೇರೆ ಯಾವುದೇ ಭಾಷೆಯ ಪ್ರತಿಸ್ಪರ್ಧಿಯಾಗಿರಲು ಸಾಧ್ಯವಿಲ್ಲ. ಹಿಂದಿ ದೇಶದ ಎಲ್ಲ ಭಾಷೆಗಳ ಮಿತ್ರ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಿಂದಿ ಜತೆಗೆ ಪ್ರಾದೇಶಿಕ’ ಎಂದು ಹೇಳಿದರು.

‘ಹಿಂದಿ ಭಾಷೆ ಅಭಿವೃದ್ಧಿಯಾದಾಗ ಮಾತ್ರ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಬೆಳವಣಿಗೆ ಹೊಂದುತ್ತವೆ.ಈ ಎಲ್ಲ ಭಾಷೆಗಳ ಸಮೃದ್ಧಿಯಿಂದ ಮಾತ್ರ ಹಿಂದಿಯೂ ಏಳಿಗೆ ಹೊಂದುತ್ತದೆ. ಹಿಂದಿಯ ಜತೆಗೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸಬೇಕು. ಎಲ್ಲಿಯವರೆಗೆ ನಾವು ಭಾಷೆಗಳ ಅಸ್ತಿತ್ವವನ್ನು ಸ್ವೀಕರಿಸುವುದಿಲ್ಲವೋ ಅಲ್ಲಿಯವರೆಗೆ ದೇಶವನ್ನು ನಮ್ಮದೇ ಭಾಷೆಯಲ್ಲಿ ಮುನ್ನಡೆಸುವ ಕನಸು ಸಾಕಾರವಾಗಲು ಸಾಧ್ಯವಿಲ್ಲ. ಮಾತೃಭಾಷೆಗಳು ಮತ್ತು ಎಲ್ಲ ಭಾಷೆಗಳನ್ನು ಜೀವಂತವಾಗಿಡುವುದು ಹಾಗೂ ಸಮೃದ್ಧಗೊಳಿಸುವುದು ನಮ್ಮ ಗುರಿ’ ಎಂದು ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.