ಇಸ್ಲಾಮಾಬಾದ್ (ಪಿಟಿಐ): ಭಾರತದ ಜೊತೆ ಧಾರ್ಮಿಕ ಪ್ರವಾಸೋದ್ಯಮವನ್ನು ಆರಂಭಿಸುವ ಕುರಿತು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಆಡಳಿತ ಪಕ್ಷದ ಪ್ರಮುಖ ಹಿಂದೂ ಸಂಸದರೊಬ್ಬರು ಪ್ರಸ್ತಾವ ಸಲ್ಲಿಸಿದ್ದಾರೆ. ಇದನ್ನು ಪಾಕಿಸ್ತಾನ ವಿದೇಶಾಂಗ ಕಚೇರಿಯೂ ಬೆಂಬಲಿಸಿದೆ ಎಂದು ಮೂಲಗಳು ಮಂಗಳವಾರ ಇಲ್ಲಿ ತಿಳಿಸಿವೆ.

ಪ್ರಸ್ತಾವನೆಯು ಭಾರತ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿರುವುದಾಗಿಯೂ ಹೇಳಲಾಗಿದೆ. ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಶೇಷ ವಿಮಾನದ ಮೂಲಕ ಪಾಕಿಸ್ತಾನ ಯಾತ್ರಾರ್ಥಿಗಳ ನಿಯೋಗವೊಂದು ಜನವರಿ 29 ರಂದು ಭಾರತಕ್ಕೆ ಹೊರಡಲಿದೆ. ತಾವು ಇದರ ನೇತೃತ್ವ ವಹಿಸುವುದಾಗಿಪಾಕಿಸ್ತಾನ ಹಿಂದೂ ಪರಿಷತ್ತಿನ ಮುಖ್ಯಸ್ಥ ಮತ್ತು ರಾಷ್ಟ್ರ ಸಂಸತ್ತಿನ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ ಹೇಳಿದ್ದಾರೆ.

ಮೂರು ದಿನಗಳ ಕಾಲ ನಿಯೋಗ ಭಾರತದಲ್ಲಿ ಇರಲಿದೆ. ಈ ವೇಳೆ ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾ, ಅಜ್ಮೀರ್‌ನ ಖವಾಜ್ ಘರೀಬ್ ನವಾಜ್ ದರ್ಗಾ ಮತ್ತು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲು ಯೋಜಿಸಿದೆ ಎಂದು ರಮೇಶ್ ಹೇಳಿದ್ದಾರೆ.

ಜಂಟಲ್ಮನ್ ಜೋ ಬೈಡನ್ ಬಾಯಲ್ಲಿ ಇದೆಂತಾ ಮಾತು..!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.