ನವದೆಹಲಿ: ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟು ಐದನೆಯ ವರ್ಷ ಪ್ರವೇಶಿಸಿರುವ ಸಂದರ್ಭದಲ್ಲಿ ಅದರ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಚೀನಾ ಜೊತೆ ಬಾಕಿ ಉಳಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಇರಾದೆಯನ್ನು ಭಾರತ ಹೊಂದಿದೆ ಎಂದಿದ್ದಾರೆ.

ದ್ವಿಪಕ್ಷೀಯ ಸಂಬಂಧವು ಸಹಜ ಸ್ಥಿತಿಗೆ ಬರುವುದು ಗಡಿ ಪ್ರದೇಶದಲ್ಲಿನ ಶಾಂತಿಯನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಜೈಶಂಕರ್ ಅವರು, ಬಾಕಿ ಉಳಿದಿರುವ ವಿಷಯಗಳು ಪ್ರಮುಖವಾಗಿ, ಪಹರೆಯ ಹಕ್ಕುಗಳು ಮತ್ತು ಪಹರೆಯ ಸಾಮರ್ಥ್ಯಕ್ಕೆ ಸಂಬಂಧಿಸಿವೆ ಎಂದಿದ್ದಾರೆ.

‘ಇಂದು ಚೀನಾದ ಜೊತೆಗಿನ ನಮ್ಮ ಸಂಬಂಧವು ಸಹಜವಾಗಿ ಇಲ್ಲ. ಏಕೆಂದರೆ, ಗಡಿ ಪ್ರದೇಶಗಳಲ್ಲಿ ಶಾಂತಿಗೆ ಭಂಗ ಉಂಟಾಗಿದೆ. ಹೀಗಾಗಿ ಪ್ರಧಾನಿಯವರು, ಈಗಿನ ಪರಿಸ್ಥಿತಿಯು ತಮ್ಮ ಹಿತಾಸಕ್ತಿಗಳಿಗೂ ಪೂರಕವಾಗಿ ಇಲ್ಲ ಎಂಬುದನ್ನು ಚೀನಾದವರು ಅರಿಯಬೇಕು ಎಂದು ಹೇಳಿದ್ದರು’ ಎಂದು ಜೈಶಂಕರ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಸಂದರ್ಶನವೊಂದರಲ್ಲಿ, ‘ಗಡಿಯಲ್ಲಿನ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕಿದೆ, ಭಾರತ ಮತ್ತು ಚೀನಾ ನಡುವೆ ಶಾಂತಿಯುತ ಹಾಗೂ ಸ್ಥಿರವಾದ ಸಂಬಂಧವು ಎರಡು ದೇಶಗಳಿಗೆ ಮಾತ್ರವೇ ಮುಖ್ಯವಲ್ಲ; ಇಡೀ ಪ್ರದೇಶಕ್ಕೆ ಹಾಗೂ ವಿಶ್ವಕ್ಕೆ ಅದು ಮುಖ್ಯ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.