ಹೈದರಾಬಾದ್: 2019ರಲ್ಲಿ ಪತ್ನಿ ಮೇಲೆ ಕ್ರೌರ್ಯ ಮೆರೆದು, ಕೊಲೆ ಮಾಡಿದ್ದ 38 ವರ್ಷದ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.

ಹೆಚ್ಚುವರಿ ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶರಾದ ಸಿ.ವಿ.ಎಸ್ ಸಾಯಿ ಭೂಪತಿಯವರು, ಆರೋಪಿ ಇಮ್ರಾನುಲ್ ಹಕ್ ಎಂಬಾತನಿಗೆ ಈ ಶಿಕ್ಷೆ ವಿಧಿಸಿದ್ದು, ಜತೆಗೆ ₹10 ಸಾವಿರ ದಂಡ ವಿಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.ಶ್ರಮಜೀವಿ ಎಕ್ಸ್ಪ್ರೆಸ್ ರೈಲು ಸ್ಫೋಟ: ಇಬ್ಬರಿಗೆ ಮರಣದಂಡನೆ; ₹ 5ಲಕ್ಷ ದಂಡ.
ಇದೊಂದು ಕ್ರೂರ ಪ್ರಕರಣ. ಸಣ್ಣ–ಪುಟ್ಟ ವಿಚಾರಗಳಿಗೂ ದೋಷಿ ಪತ್ನಿಯನ್ನು ಹಿಂಸಿಸುತ್ತಿದ್ದ. ಕಾರು ಖರೀದಿ ಮಾಡಲು ₹30 ಸಾವಿರ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ದಕ್ಷಿಣ ವಲಯದ ಸಹಾಯಕ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಹೇಳಿದ್ದಾರೆ.

ದೋಷಿಯು, ಕತ್ತರಿಗಳ ಮೂಲಕ ಪತ್ನಿಯ ಕುತ್ತಿಗೆಗೆ ಇರಿದು, ತಲೆಗೆ ಸುತ್ತಿಗೆಯಿಂದ ಹೊಡೆದಿದ್ದ ಗುಪ್ತಾಂಗಕ್ಕೆ ಸ್ಕ್ರೂ ತುರುಕಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 2019ರ ಜನವರಿ 6 ರಂದು ಈ ಪಾಶವೀ ಕೃತ್ಯ ಎಸಗಿದ್ದ.
.ಹೈದರಾಬಾದ್ | ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ: 9 ಮಂದಿ ಸಾವು.
ದೂರಿನ ಅನ್ವಯ, ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು, ಹಕ್‌ನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.