ನವದೆಹಲಿ: ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

‘ನನಗೆ ಪ್ರಧಾನಿ ಹುದ್ದೆಯ ಆಕಾಂಕ್ಷೆಯಿಲ್ಲ. ಆರ್ಎಸ್ಎಸ್ ಕೂಡಾ ನನ್ನನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನಾಗಿ ಬಿಂಬಿಸುವ ಉದ್ದೇಶ ಹೊಂದಿಲ್ಲ. ರಾಜಕೀಯವನ್ನೇ ಆಗಲಿ ಅಥವಾ ಕೆಲಸವನ್ನೇ ಆಗಲಿ ‘ಲೆಕ್ಕಾಚಾರ’ ಹಾಕಿ ಮಾಡುವುದು ನನ್ನ ಗುಣ ಅಲ್ಲ’ ಎಂದು ಗಡ್ಕರಿ ಹೇಳಿದ್ದಾರೆ.

ಅತಂತ್ರ ಲೋಕಸಭೆ ಏರ್ಪಟ್ಟರೆ ಗಡ್ಕರಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ‘ನಾನು ಪ್ರಧಾನಿ ರೇಸ್ನಲ್ಲಿಲ್ಲ. ಅವಿರತ ಕೆಲಸವೇ ನನ್ನ ಮಂತ್ರ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನು ಕನಸು ಕಾಣುವುದಿಲ್ಲ. ಲಾಬಿ ನಡೆಸಲು ಯಾರ ಬಳಿಗೂ ಹೋಗುವುದಿಲ್ಲ. ಇದು ನನ್ನ ಹೃದಯದ ಮಾತು. ನಾನಾಗಲೀ, ಆರ್ಎಸ್ಎಸ್ ಆಗಲೀ ಇಂತಹ ಯೋಚನೆ ಮಾಡಿಲ್ಲ. ಅಂತಿಮವಾಗಿ ದೇಶದ ಹಿತಾಸಕ್ತಿಯೇ ನಮಗೆ ಮುಖ್ಯ’ ಎಂದು ಹೇಳಿದ್ದಾರೆ.

ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು ‘ಜನರ ಭಾವನೆ ಏನಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ಮಾಡಲು ಏನೂ ಇಲ್ಲ, ಪರೋಕ್ಷವಾಗಿ ಏನನ್ನೂ ಮಾಡುತ್ತಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.