ರಾಯಪುರ: ಛತ್ತೀಸಗಢದ ರಾಜಧಾನಿ ರಾಯಪುರದ ವಿಧಾನಸಭಾ ಕ್ಷೇತ್ರದ ಎಲ್ಲಾ 201 ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನ ಪ್ರಕ್ರಿಯೆಯನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ. ದೇಶದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.

‘ರಾಯಪುರ ನಗರ ಉತ್ತರ ಕ್ಷೇತ್ರದಲ್ಲಿ 201 ಮತಗಟ್ಟೆಗಳಿವೆ. ಚುನಾವಣಾ ಅಧಿಕಾರಿಯಿಂದ ಮತಗಟ್ಟೆ ಅಧಿಕಾರಿಯವರೆಗೆ ಎಲ್ಲರೂ ಮಹಿಳೆಯರೇ. ಇಲ್ಲಿ 1046 ಮಹಿಳೆಯರನ್ನು ನೇಮಿಸಲಾಗಿತ್ತು’ ಎಂದು ಚುನಾವಣಾ ಆಯೋಗ ಹೇಳಿದೆ.

ಈ ಪೈಕಿ 804 ಮಹಿಳೆಯರಿಗೆ ನೇರ ಜವಾಬ್ದಾರಿ ಇದ್ದರೆ, ಸುಮಾರು 200 ಮಹಿಳೆಯರನ್ನು ಕಾಯ್ದಿರಿಸಲಾಗಿತ್ತು. ಇಲ್ಲಿನ ವೀಕ್ಷಕಿ ಐಎಎಸ್ ಅಧಿಕಾರಿ ಆರ್. ವಿಮಲಾ ಮತ್ತು ಅವರ ಸಂಪರ್ಕ ಅಧಿಕಾರಿ ಸಹ ಮಹಿಳೆಯಾಗಿದ್ದರು. ಹೆಚ್ಚಿನ ಬೂತ್‌ಗಳಲ್ಲಿ ಭದ್ರತೆಯನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಿದ್ದಾರೆ.

ವಿಶೇಷವೆಂದರೆ, ಛತ್ತೀಸಗಢದ ಮುಖ್ಯ ಚುನಾವಣಾ ಅಧಿಕಾರಿ ಸಹ ಮಹಿಳಾ ಐಎಎಸ್ ಅಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಾಲೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.