ನವದೆಹಲಿ: ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆಯುವುದನ್ನು ತಪ್ಪಿಸಿಕೊಂಡ ಮಕ್ಕಳ ಸಂಖ್ಯೆ ಎಷ್ಟು ಎಂಬ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯು ವಿಶ್ವ ಆರೋಗ್ಯ ಸಂಸ್ಥೆ – ಸಿಡಿಸಿ ಹೇಳಿಕೆಗಿಂತ ಭಿನ್ನವಾಗಿದೆ.

ಸಚಿವಾಲಯದ ಹೇಳಿಕೆ ಪ್ರಕಾರ 2022–23ರಲ್ಲಿ 21,310 ಮಕ್ಕಳು ಮಾತ್ರ ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿಲ್ಲ. ಆದರೆ ಡಬ್ಲ್ಯುಎಚ್‌ಒ–ಸಿಡಿಸಿ ವರದಿ ಪ್ರಕಾರ ಅಂದಾಜು 11 ಲಕ್ಷ ಮಕ್ಕಳು ಈ ಲಸಿಕೆ ಪಡೆದಿಲ್ಲ. ಸಚಿವಾಲಯದ ಹೇಳಿಕೆಯು ಡಬ್ಲ್ಯುಎಚ್‌ಒ–ಸಿಡಿಸಿ ವರದಿ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.

ಡಬ್ಲ್ಯುಎಚ್‌ಒ–ಸಿಡಿಸಿ ವರದಿ ಪ್ರಕಾರ, 2022ರಲ್ಲಿ ಜಾಗತಿಕವಾಗಿ 2.2 ಕೋಟಿ ಮಕ್ಕಳು ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿಲ್ಲ. ಈ ಪೈಕಿ ಅಂದಾಜು 11 ಲಕ್ಷ ಮಕ್ಕಳು ಭಾರತದಲ್ಲಿಯೇ ಇದ್ದಾರೆ. ಇದು ಅಂದಾಜು ಲೆಕ್ಕ ಆಧರಿಸಿ ಅಂಕಿ–ಅಂಶ.

ಸಚಿವಾಲಯವು ತನ್ನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಆಧರಿಸಿ, ಅರ್ಹ ಮಕ್ಕಳ ಪೈಕಿ 2022–23ರಲ್ಲಿ 21,310 ಮಕ್ಕಳು ಮಾತ್ರ ಈ ಲಸಿಕೆ ಪಡೆದಿಲ್ಲ ಎಂದು ಹೇಳಿದೆ. ‘ಡಬ್ಲ್ಯುಎಚ್‌ಒ–ಸಿಡಿಸಿ ವರದಿಯು ನಿಜವಾದ ಚಿತ್ರಣವನ್ನು ನೀಡುತ್ತಿಲ್ಲ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆಯ ವಿಚಾರದಲ್ಲಿ ಡಬ್ಲ್ಯುಎಚ್‌ಒ ನೀಡಿದ್ದ ಅಂಕಿ–ಅಂಶವನ್ನು ಕೂಡ ಕೇಂದ್ರ ಸರ್ಕಾರವು ಈ ಹಿಂದೆ ಅಲ್ಲಗಳೆದಿತ್ತು. ದಡಾರ ಲಸಿಕೆ ಪಡೆಯದ ಮಕ್ಕಳ ಸಂಖ್ಯೆಯನ್ನು ಅಂದಾಜಿಸಿದ ತಂಡಕ್ಕೆ ಪ್ರತಿಕ್ರಿಯೆ ಕೋರಿ ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ ಉತ್ತರ ದೊರೆತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.