ನವದೆಹಲಿ: ಭಾರತವು ಅಗ್ನಿ-5 ಹೆಸರಿನ, ಅಣ್ವಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಕರಾವಳಿಯಲ್ಲಿ ಈ ಪ್ರಯೋಗ ನಡೆದಿದೆ.

ಈ ಕ್ಷಿಪಣಿಯು 5,000 ಕಿಲೊ ಮೀಟರ್ ದೂರದ, ಅಂದರೆ ಚೀನಾದ ಉತ್ತರ ತುದಿಯನ್ನು ಒಳಗೊಂಡಂತೆ ಬಹುತೇಕ ಇಡೀ ಏಷ್ಯಾ ಹಾಗೂ ಯುರೋಪ್ನ ಕೆಲ ಪ್ರದೇಶಗಳವರೆಗಿನ ಗುರಿಯ ಮೇಲೆ ದಾಳಿ ನಡೆಸಬಲ್ಲದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಚೀನಾವು ಗಡಿ ಕ್ಯಾತೆ ತೆಗೆಯುತ್ತಿರುವ ಸಂದರ್ಭದಲ್ಲೇ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಭಾರತವು ತನ್ನ ಪರಮಾಣು ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಚೀನಾವು ಡಾಂಗ್ಫೆಂಗ್–41 ಹೆಸರಿನ ಕ್ಷಿಪಣಿಯನ್ನು ಹೊಂದಿದೆ. ಇದು12 ಸಾವಿರದಿಂದ 15 ಸಾವಿರ ಕಿಲೊ ಮೀಟರ್ ದೂರದ ಗುರಿಯ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.

ಅಗ್ನಿ 1, 2,3,4 ಹೆಸರಿನ ಕ್ಷಿಪಣಿಗಳನ್ನು ಈಗಾಗಲೇ ರಕ್ಷಣಾ ಪಡೆಗೆ ಸೇರ್ಪಡೆ ಮಾಡಲಾಗಿದೆ. ಇವು 700 ಕಿ.ಮೀ ನಿಂದ 3,500 ಕಿ.ಮೀ ದೂರದ ಗುರಿಯ ಮೇಲೆ ದಾಳಿ ನಡೆಸಬಲ್ಲವಾಗಿವೆ.

ಭಾರತವು ಕಳೆದ ವರ್ಷದ ಅಕ್ಟೋಬರ್ನಲ್ಲೂ ಕ್ಷಿಪಣಿಯೊಂದರ ಇದೇ ಮಾದರಿಯ ಪರೀಕ್ಷೆಯನ್ನು ಕೈಗೊಂಡಿತ್ತು.

17 ಮೀಟರ್ನಷ್ಟು ಎತ್ತರವಿರುವಅಗ್ನಿ–5 ಕ್ಷಿಪಣಿಯು ಅತ್ಯಂತ ನಿಖರವಾಗಿ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದು 1.5 ಟನ್ ಸಾಮರ್ಥ್ಯದ ಸಿಡಿತಲೆ ಹೊತ್ತೊಯ್ಯಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.