ನವದೆಹಲಿ (ಪಿಟಿಐ): ‘ಭಾರತ ಎಂದಿಗೂ ಮಿತಭಾಷಿಯಾಗಿದ್ದು, ಮಾತುಕತೆಗೆ ಆದ್ಯತೆ ನೀಡಲಿದೆ ಹಾಗೂ ಅಂತರಾಷ್ಟ್ರೀಯ ಕಾಯ್ದೆಯನ್ನು ಮುಖ್ಯವಾಗಿ ಪ್ರತಿಪಾದಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದರು.

ಆಗಸ್ಟ್ ತಿಂಗಳಿಗೆ ಅನ್ವಯಿಸಿಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಅವರು ಈ ಮಾತು ಹೇಳಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆ ಹಾಗೂ ಭದ್ರತೆಯ ದೃಷ್ಟಿಯಿಂದ ಜವಾಬ್ದಾರಿಯುತವಾಗಿ, ಸೇರ್ಪಡೆಯುಕ್ತ ಪರಿಹಾರಕ್ರಮಗಳ ಜಾರಿಗೆ ಒತ್ತು ನೀಡಲಾಗುವುದು ಎಂದೂ ಭಾರತವು ಭರವಸೆ ನೀಡಿದೆ.

‘ಆಗಸ್ಟ್ ತಿಂಗಳಿಗೆ ಅನ್ವಯಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳಲ್ಲಿ ಉತ್ಪಾದಕತೆ ವೃದ್ಧಿಯನ್ನು ಭಾರತ ನಿರೀಕ್ಷಿಸಲಿದೆ’ ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ವಿರುದ್ಧ ಸ್ಪೀಕರ್ಗೆ ಕೇರಳ ಸಂಸದ ಪ್ರೇಮಚಂದ್ರನ್ ದೂರು

‘ಇದೊಂದು ಸ್ಮರಣಾರ್ಹ ದಿನ’ ಎಂದು ಬಣ್ಣಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಭಾರತದ ಜಾಗತಿಕ ದೃಷ್ಟಿಕೋನದ ಅಭಿವ್ಯಕ್ತಿಯಾಗಿ ಸಂಸ್ಕೃತದ ಉಕ್ತಿಯಾದ ‘ವಸುಧೈವ ಕುಟುಂಬಕಂ’ ಅನ್ನು ಉಲ್ಲೇಖಿಸಿದರು.

ಭಾರತವು ಭದ್ರತಾ ಮಂಡಳಿಯನ್ನು ಅಧ್ಯಕ್ಷ ಸ್ಥಾನದಿಂದ ಗೌರವ, ಸಂವಾದ, ಸಹಯೋಗ, ಶಾಂತಿ ಮತ್ತು ಸಮೃದ್ಧಿಯ ದೃಷ್ಟಿಕೋನದಿಂದ ಮುನ್ನಡೆಸಲಿದೆ ಎಂದು ಬಾಗ್ಚಿ ಹೇಳಿದರು. ಭಾರತದ ಅಧಿಕಾರವಧಿ ಆಗಸ್ಟ್ 2ರಿಂದ ಆರಂಭವಾಗಲಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತಯೇತರ ಸದಸ್ಯನಾಗಿ ಇದು ಭಾರತದ ಏಳನೇ ಅವಧಿಯಾಗಿದೆ.

ತಾಲಿಬಾನಿಗಳ ವಶದಲ್ಲಿದ್ದಾಗ ವಿರೂಪಗೊಂಡಿದ್ದ ಫೋಟೊ ಜರ್ನಲಿಸ್ಟ್ ಸಿದ್ಧಿಕಿ ಶರೀರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.