ಡೆಹಾಡ್ರೂನ್: ತಮ್ಮ ಶ್ರೇಷ್ಠ ಬೌಲಿಂಗ್ ಮೂಲಕ ಏಕದಿನ ವಿಶ್ವಕಪ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಕಾಪಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ನೈನಿತಾಲ್ ಬಳಿ ಕಾರು ಚಲಾಯಿಸುತ್ತಿರುವ ವೇಳೆ ಅಪಘಾತ ಸಂಭವಿಸಿದ್ದು, ಕಾರು ಇಳಿಜಾರಿನಲ್ಲಿ ಉರುಳಿ ಮರವೊಂದಕ್ಕೆ ಗುದ್ದಿತ್ತು. ವಿಶ್ವಕಪ್ ಫೈನಲ್ನ ನಂತರ ನೈನಿತಾಲ್ಗೆ ತೆರಳಿ ವಿಶ್ರಾಂತಿ ಪಡೆಯುತ್ತಿರುವ ಶಮಿ, ಶನಿವಾರ ಸಂಜೆ ಇದೇ ಮಾರ್ಗವಾಗಿ ಕಾರು ಚಲಾಯಿಸುತ್ತಿದ್ದರು. ಕಾರು ಇಳಿಜಾರಿನಲ್ಲಿ ಉರುಳುತ್ತಿರುವುದನ್ನು ಕಂಡ ಶಮಿ, ತಕ್ಷಣ ಕಾರು ನಿಲ್ಲಿಸಿ ವ್ಯಕ್ತಿಯ ರಕ್ಷಣೆಗೆ ತೆರಳಿದ್ದಾರೆ. ಕಾರಿನಿಂದ ವ್ಯಕ್ತಿಯನ್ನು ಹೊರೆಗೆಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಶಮಿ, ದೇವರು ಅವರಿಗೆ(ಅಪಘಾತಕ್ಕೀಡಾದ ವ್ಯಕ್ತಿಗೆ) ಎರಡನೇ ಜನ್ಮ ನೀಡಿದ್ದಾನೆ ಎಂದಿದ್ದಾರೆ.

‘ವ್ಯಕ್ತಿಯೊಬ್ಬರ ಪ್ರಾಣ ಉಳಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅವರು(ಅಪಘಾತಕ್ಕೀಡಾದ ವ್ಯಕ್ತಿ) ತುಂಬಾ ಅದೃಷ್ಟವಂತರು ಯಾಕೆಂದರೆ ದೇವರು ಅವರಿಗೆ ಮತ್ತೊಂದು ಜನ್ಮ ನೀಡಿದ್ದಾನೆ. ನನ್ನ ಕಣ್ಣ ಮುಂದೆಯೇ ಅವರ ಕಾರು ಇಳಿಜಾರಿನಲ್ಲಿ ಉರುಳಿ ಬಿದ್ದಿದ್ದು, ನಾವೆಲ್ಲ ಸೇರಿ ಅವರನ್ನು ರಕ್ಷಿಸಿದೇವು’ ಎಂದರು.

ಶಮಿ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.