ನವದೆಹಲಿ: ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಭಾನುವಾರ ಆರಂಭಿಸಿತು.

ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧನೌಕೆ ಇದಾಗಿದ್ದು, ಮುಂದಿನ ಆಗಸ್ಟ್ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

40,000 ಟನ್ ತೂಕದ ವಿಮಾನವಾಹಕ ಯುದ್ಧನೌಕೆ, ಆಗಸ್ಟ್ನಲ್ಲಿ ಐದು ದಿನಗಳ ಮೊದಲ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಯುದ್ಧನೌಕೆಯ ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆ ತೃಪ್ತಿಕರವಾಗಿದೆ ಎಂದೂ ನೌಕಾಪಡೆ ಹೇಳಿತ್ತು.

ಈ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಕೊಚ್ಚಿಯಿಂದ ಭಾನುವಾರ ಪ್ರಯಾಣ ಬೆಳೆಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.