ತಿರುವನಂತಪುರ: ಕೊಚ್ಚಿಯ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ನಡೆದ ಅಂತರ ಧರ್ಮೀಯ ಮದುವೆ ಅಸಿಂಧು ಎಂದು ಚರ್ಚ್ ರಚಿಸಿದ್ದ ಸಮಿತಿ ಘೋಷಿಸಿದೆ.

ಅಲ್ಲದೇ, ಈ ಮದುವೆ ಕಾರ್ಯ ನೆರವೇರಿಸಿದ ಪಾದ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದೂ ಸಮಿತಿ ಹೇಳಿದೆ.

ಕ್ಯಾಥೋಲಿಕ್ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ ಕಳೆದ ನವೆಂಬರ್‌ನಲ್ಲಿ ನೆರವೇರಿತ್ತು. ಈ ಕುರಿತು ವಿಚಾರಣೆ ನಡೆಸಿ, ವರದಿ ನೀಡಲು ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಚರ್ಚ್ ರಚಿಸಿತ್ತು. ನಿಯಮಗಳನ್ನು ಪಾಲನೆ ಮಾಡದ ಕಾರಣ ಈ ಮದುವೆ ಅಸಿಂಧು ಎಂದು ಸಮಿತಿ ಹೇಳಿದೆ.

ಕ್ರೈಸ್ತ ಧರ್ಮದ ಮಹಿಳೆಯರನ್ನು ಗುರಿಯಾಗಿಸಿಕೊಂಡು ‘ಲವ್ ಜಿಹಾದ್’ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇಲ್ಲಿ ನಡೆದ ಅಂತರಧರ್ಮೀಯ ವಿವಾಹದ ಬಗ್ಗೆಚರ್ಚ್‌ನ ಆಂತರಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.