ನವದೆಹಲಿ: ಐಎನ್ಎಕ್ಸ್ಮೀಡಿಯಾ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ದಾಖಲೆಗಳನ್ನು ಪರಿಶೀಲಿಸಲು ಆರೋಪಿಗೆ ಅವಕಾಶ ನೀಡಲಾಗದು ಎಂದು ದೆಹಲಿ ಹೈಕೋರ್ಟ್ ಎದುರು ಸಿಬಿಐ ಪ್ರತಿಪಾದಿಸಿತು.

ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಅವರ ಪುತ್ರ ಕಾರ್ತಿ ಈ ಪ್ರಕರಣದ ಆರೋಪಿಗಳು. ಇವರು ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇರುವ ಕಾರಣ ಪರಿಶೀಲನೆಗೆ ಅವಕಾಶ ನೀಡಲಾಗದು ಎಂದೂ ಸಿಬಿಐ ತಿಳಿಸಿತು.

ದಾಖಲೆಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದ ಕೆಳಹಂತದ ಕೋರ್ಟ್ನ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರು, ‘ಪರಿಶೀಲನೆ ಕುರಿತ ಅಂಶವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಆರೋಪಿಯ ಪರವಾಗಿ ಇತ್ಯರ್ಥಪಡಿಸಿದೆ’ ಎಂದು ಹೇಳಿದರು.

ಹೆಚ್ಚಿನ ಹೊಣೆಯನ್ನು ಆರೋಪಿಗೆ ಹೊರಿಸಲಾಗಿದೆ. ಕಾಯ್ದೆಯು ಮುಂದಡಿ ಇರಿಸಬೇಕಾಗಿದೆ. ಪ್ರತಿ ತನಿಖಾ ಸಂಸ್ಥೆಯು ಸಾವಿರಾರು ದಾಖಲೆಗಳನ್ನು ಜಪ್ತಿ ಮಾಡಲಿದೆ. 500 ದಾಖಲೆಗಳನ್ನು ಉಳಿಸಿ, ಉಳಿದಿದ್ದನ್ನು ಬದಿಗಿರಿಸಲಿದೆ. ಅವುಗಳು ನಿಮ್ಮ ಆಸ್ತಿಯಲ್ಲ. ಅವು ಆರೋಪಿಗೆ ಬೇಕಾದ್ದು ಇರಬಹುದು ಎಂದು ನ್ಯಾಯಮೂರ್ತಿ ತಿಳಿಸಿದರು.

ಸಿಬಿಐ ಅರ್ಜಿ ಕುರಿತ ಆದೇಶವನ್ನು ಕೋರ್ಟ್ ಕಾಯ್ದಿರಿಸಿದ್ದು, ಈ ಸಂಬಂಧ ಲಿಖಿತ ಪ್ರತಿಕ್ರಿಯೆ ದಾಖಲಿಸುವಂತೆ ಸಿಬಿಐ ಮತ್ತು ಆರೋಪಿ ಇಬ್ಬರಿಗೂ ಸೂಚನೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.