ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

60ನೇ ವಯಸ್ಸಿನಲ್ಲಿ ಪಿಎಚ್‌ಡಿ ಪಡೆದ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್

Published 19 ಜುಲೈ 2024, 12:31 IST
Last Updated 19 ಜುಲೈ 2024, 12:31 IST
ಅಕ್ಷರ ಗಾತ್ರ

ಚೆನ್ನೈ: ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನಲ್ಲಿ (ಐಐಟಿ-ಎಂ) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್‌ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಅವರು ಈ ಸಾಧನೆ ಮಾಡಿರುವುದು ವಿಶೇಷ.

ಸೋಮನಾಥ್ ಅವರ ಪಿಎಚ್‌ಡಿ ಪದವಿಯ ವಿಷಯ ‘Vibration response studies on modified hyper elastic material models for application aerospace systems’ ಎಂಬುವುದಾಗಿದೆ. ಐಐಟಿ-ಎಂನ ನಿರ್ದೇಶಕ ಪ್ರೊ. ವಿ ಕಾಮಕೋಟಿ ಮತ್ತು ಐಐಟಿ-ಎಂನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಪವನ್ ಗೋಯೆಂಕಾ ಅವರು ಪದವಿಯನ್ನು ಹಸ್ತಾಂತರಿಸಿದರು.

ಭಾರತೀಯ ವಿಜ್ಞಾನಕ್ಕೆ ಸೋಮನಾಥ್ ಅವರ ಕೊಡುಗೆಗಳನ್ನು ಗೌರವಿಸಲು, ವಿಶೇಷವಾಗಿ ಭಾರತದ ಮೂರನೇ ಮಾನವರಹಿತ ಚಂದ್ರಯಾನದ ಯಶಸ್ವಿಗಾಗಿ ಸಂಸ್ಥೆಯು ತನ್ನ 61ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮನಾಥ್‌, 'ಜಿಎಸ್‌ಎಲ್‌ವಿ–ಎಂಕೆ 3' ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಪಿಎಚ್‌ಡಿಗೆ ಸೇರಿಕೊಂಡೆ. ಅಂದು ಆ ಕೆಲಸದಲ್ಲಿ ಮಗ್ನನಾಗಿದ್ದರಿಂದ ಪಿಎಚ್‌ಡಿಯನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ಇಸ್ರೊ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದು ನಿಜವಾದ ಅದೃಷ್ಟ. ಇದು ನಿಜಕ್ಕೂ ದೊಡ್ಡ ಗೌರವ' ಎಂದು ಹೇಳಿದರು.

ಹಳ್ಳಿಯ ಹುಡುಗನಾದರೂ ನಾನು ವಿಜ್ಞಾನದಲ್ಲಿ ಅಗ್ರಸ್ಥಾನ ಪಡೆದಿದ್ದೆ. ಐಐಟಿಯಂತಹ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪರೀಕ್ಷೆ ಬರೆಯುವ ಧೈರ್ಯವಿರಲಿಲ್ಲ. ಇಂದಿಗೂ ಐಐಟಿ–ಎಂನಂಥ ಶಿಕ್ಷಣ ಸಂಸ್ಥೆಯ ಪದವಿ ಪಡೆಯುವ ಆ ಕನಸನ್ನು ಕಾಪಿಟ್ಟುಕೊಂಡಿದ್ದೇನೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT