ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

J&K Result 2024: ಗೆದ್ದವರು – ಸೋತವರು ಯಾರ್‍ಯಾರು? ಇಲ್ಲಿದೆ ಮಾಹಿತಿ...

Published : 8 ಅಕ್ಟೋಬರ್ 2024, 9:59 IST
Last Updated : 8 ಅಕ್ಟೋಬರ್ 2024, 13:39 IST
ಫಾಲೋ ಮಾಡಿ
Comments

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಯಾವೆಲ್ಲಾ ಪ್ರಮುಖ ನಾಯಕರು ಗೆಲುವು ಸಾಧಿಸಿದ್ದಾರೆ ಮತ್ತು ಯಾರೆಲ್ಲಾ ಸೋತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

  • ಬುಡಗಾಮ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಅಭ್ಯರ್ಥಿ ಒಮರ್‌ ಅಬ್ದುಲ್ಲಾ ಗೆಲುವು ಸಾಧಿಸಿದ್ದಾರೆ. ಪಿಡಿಪಿ ಅಭ್ಯರ್ಥಿ  ಆಗಾ ಸೈಯದ್‌ ಮುಂತಾಜಿರ್‌ ಮೆಹ್ದಿ ವಿರುದ್ಧ 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಒಮರ್‌  36,010 ಮತಗಳನ್ನು ಗಳಿಸಿದ್ದರೆ, ಮೆಹ್ದಿ 17,525 ಮತ ಗಳಿಸಿದ್ದಾರೆ.

  • ಕ್ಷಿತ್ವಾರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಗುನ್‌ ಪರಿಹಾರ್‌ 500 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

  • ಉದಮ್‌ಪುರ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ರಣಬೀರ್‌ ಸಿಂಗ್‌ ಪಠಾನಿಯಾ ಗೆಲವು ಸಾಧಿಸಿದ್ದಾರೆ.

  • ಗುರೇಜ್‌ ವಿಧಾನಸಭಾ ಕ್ಷೇತ್ರದಲ್ಲಿ ನ್ಯಾಷನಲ್‌ ಕಾನ್ಪರೆನ್ಸ್‌ ಪಕ್ಷದ ನಜೀರ್ ಅಹಮದ್‌ ಖಾನ್‌ ನಾಲ್ಕನೆ ಬಾರಿಗೆ ಗೆದ್ದಿದ್ದಾರೆ. ಬಿಜೆಪಿಯ ಫಕೀರ್‌ ಮೊಹಮ್ಮದ್‌ ಖಾನ್‌ ವಿರುದ್ಧ 1,132 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

  • ದೋಡಾ ಕ್ಷೇತ್ರದಲ್ಲಿ ಎಎಪಿ ಪಕ್ಷದ ಅಭ್ಯರ್ಥಿ ಮೆಹರಾಜ್‌ ಮಲ್ಲಿಕ್‌ ಜಯ ಸಾಧಿಸಿದ್ದಾರೆ. ಬಿಜೆಪಿಯ ಗಜಯ್‌ ಸಿಂಗ್‌ ರಾಣಾ ವಿರುದ್ಧ 4,538 ಮತಗಳ ಅಂತರದಲ್ಲಿ ಮೆಹರಾಜ್‌ ಗೆದ್ದಿದ್ದಾರೆ.

  • ಗಂಡೇರ್‌ಬಲ್‌ ಕ್ಷೇತ್ರದಲ್ಲೂ ಒಮರ್‌ ಅಬ್ದಲ್ಲಾ ಗೆದ್ದು ಬೀಗಿದ್ದಾರೆ.

  • ಜಮ್ಮು ಮತ್ತು ಕಾಶ್ಮೀರದ ನೌಶೇರಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ರವೀಂದರ್‌ ರೈನಾ ಸೋಲು ಕಂಡಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ನ ಸುರಿಂದರ್‌ ಚೌಧರಿ 7,819 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

  • ಕಿಶ್ತ್‌ವಾರ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶಾಗುನ್‌ ಪರಿಹಾರ್‌ ಗೆಲುವು ಸಾಧಿಸಿದ್ದಾರೆ. ನ್ಯಾಷನಲ್‌ ಕಾನ್ಫರೆನ್ಸ್‌ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಸಾಜಿದ್‌ ಅಹ್ಮದ್‌ ಕಿಚ್ಲೂ ಸೋಲನಭವಿಸಿದ್ದಾರೆ.

  • ಬಿಜೆಪಿಯ ದೇವೆಂದರ್‌ ರಾಣಾ ಪಿಡಿಪಿಯ ರಫೀಕ್‌ ಅಹ್ಮದ್‌ ನಾಯ್ಕ್‌ ವಿರುದ್ಧ ನಗ್ರೋಟಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ

  • ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್‌ ಅಹ್ಮದ್‌ ಮಿರ್‌ ಅವರು ಸಂಬಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

  • ರಜೌರಿಯ ನೌಶೇರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಮ್ಮು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್‌ ರೈನಾ ಅವರು ಎನ್‌ಸಿ ಅಭ್ಯರ್ಥಿ ಸುರೀಂದರ್‌ ಚೌಧರಿ ಎದುರು 7 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT