ಕೋಲ್ಕತ್ತ: ನವರಾತ್ರಿಯ ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದ್ದು, ದುರ್ಗಾದೇವಿ ಪ್ರತಿಷ್ಠಾಪಿಸಲಾಗಿರುವ ಪೆಂಡಾಲುಗಳು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಅದರಲ್ಲೂ ಈ ಬಾರಿಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಥೀಮ್‌ನ ಪೆಂಡಾಲು ದೇಶದ ಗಮನ ಸೆಳೆಯುತ್ತಿದೆ.

ಕಳೆದ ಗಣೇಶ ಚತುರ್ಥಿಯ ಸಂದರ್ಭದಲ್ಲೂ ಕಾಂತಾರಾ ಚಿತ್ರದ ಥೀಮ್ ಹಲವು ಪೆಂಡಾಲ್‌ಗಳಲ್ಲಿ ರಾರಾಜಿಸಿತ್ತು. ಇದೀಗ ನವರಾತ್ರಿ ಸಂದರ್ಭದಲ್ಲೂ ದುರ್ಗಾದೇವಿ ಪೆಂಡಾಲಿನ ಅಲಂಕಾರಕ್ಕೂ ಕಾಂತಾರಾ ಸಿನಿಮಾದ ಥೀಮ್ ಬಳಸಲಾಗಿದೆ.

ಕೋಲದ ಸಂದರ್ಭ, ಮುಖವರ್ಣಿಕೆ, ಉಡುಪು ತೊಡುಪು, ಬೆನ್ನ ಹಿಂದೆ ಕಟ್ಟಿಕೊಳ್ಳುವ ಅಗಲವಾದ ರಚನೆಯಾದ ಅಣಿಯನ್ನು ಬಳಸಲಾಗಿದೆ. ದುರ್ಗಾ ದೇವಿಯನ್ನು ಪಂಜುರ್ಲಿಯ ದೈವದ ರೂಪದಲ್ಲಿ ಸಿದ್ಧಪಡಿಸಿ ಕೊಲ್ಕತ್ತಾದಲ್ಲಿ ಪೂಜಿಸಲಾಗುತ್ತಿದೆ. ಇದರ ಚಿತ್ರಗಳು ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.