ಶ್ರೀನಗರ: ಸೂಕ್ತ ಭದ್ರತೆ ಒದಗಿಸುವ ಮತ್ತು ಸುರಕ್ಷತಾ ಪ್ರದೇಶಗಳಲ್ಲಿ ಕೆಲಸಕ್ಕೆ ಅವಕಾಶ ನೀಡುವ ಭರವಸೆಯ ಹೊರತಾಗಿಯೂ ಕಾಶ್ಮೀರಿ, ಕಾಶ್ಮೀರ ತೊರೆಯುತ್ತಿದ್ದಾರೆ.

ಆದರೆ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಅವರನ್ನು ತಡೆದು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ.

ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳಿದರೂ, ಉಗ್ರರ ದಾಳಿ ಭೀತಿ ಮತ್ತು ಹತ್ಯೆ ಬೆದರಿಕೆ ಅವರನ್ನು ಕಾಶ್ಮೀರ ಬಿಟ್ಟು ಹೋಗುವಂತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಮಂಗಳವಾರ ಮತ್ತು ಬುಧವಾರ ಹಲವು ಕಾಶ್ಮೀರಿ ಪಂಡಿತರ ಕುಟುಂಬಗಳು ಬಾರಮುಲ್ಲಾ ಪ್ರದೇಶ ತೊರೆದು ಹೋಗುತ್ತಿವೆ.

ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಇರುವ ಕ್ಯಾಂಪ್‌ಗಳಲ್ಲಿ ಪಂಡಿತರ ಕುಟುಂಬಗಳು ಉಳಿದುಕೊಂಡಿವೆ. ಆದರೆ ಅವರು ಅಲ್ಲಿಂದ ತೆರಳದಂತೆ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವವರ ಕುಟುಂಬದವರ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ. ನಗರ ಬಿಟ್ಟು ಹೋಗದಂತೆ ಸೂಚಿಸುತ್ತಿದ್ದಾರೆ ಎಂದು ಸರ್ಕಾರಿ ಉದ್ಯೋಗಿ ಅಶ್ವನಿ ಸಾಧು ಹೇಳಿದ್ದಾರೆ.

ಹತ್ಯೆ ಭೀತಿ: ಕಾಶ್ಮೀರ ತೊರೆಯುತ್ತಿರುವ ಹಿಂದೂ ಕುಟುಂಬಗಳು

ಜತೆಗೆ, ಕಾಶ್ಮೀರಿಪಂಡಿತರ ಕುಟುಂಬಗಳು ಇರುವ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದು, ಪ್ರತಿಭಟನೆ ನಡೆಸದಂತೆ ಕೇಳಿಕೊಂಡಿದ್ದಾರೆ.

ಜಮ್ಮು–ಕಾಶ್ಮೀರ: ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರ ದಾಳಿ, ಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.