ಅಮರಾವತಿ: ಲೋಕಸಭೆಯಲ್ಲಿತೆಲುಗು ಜನರಪರವಾಗಿ ಧ್ವನಿ ಎತ್ತಲು ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಪಕ್ಷಗಳು ಜತೆಗೂಡುವ ಸಾಧ್ಯತೆಗಳಿವೆ.

ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಹಾಗೂ ತೆಲಂಗಾಣದ ಟಿಆರ್ಎಸ್ ಪಕ್ಷಗಳು ಲೋಕಸಭೆಯಲ್ಲಿ ಒಗ್ಗೂಡಿ ಹೋರಾಟ ನಡೆಸಲಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 22 ಹಾಗೂ ಟಿಆರ್ಎಸ್ 9 ಸ್ಥಾನಗಳನ್ನು ಪಡೆದಿವೆ.

ತೆಲಂಗಾಣ ಮುಖ್ಯಮಂತ್ರಿಕೆ.ಸಿ. ಚಂದ್ರಶೇಖರ್ ಆಂಧ್ರದ ನಿಯೋಜಿತ ಮುಖ್ಯಮಂತ್ರಿಜಗನ್ ಮೋಹನ್ ರೆಡ್ಡಿಅವರಪ್ರಮಾಣ ವಚನ ಸಮಾರಂಭಕ್ಕೆ ಬರಲಿದ್ದಾರೆ. ನಂತರ ಜಗನ್ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನಕಾರ್ಯಕ್ರಮದಲ್ಲಿ ಭಾಗಿಯಾಗಲೂವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ.

ಎರಡು ಪಕ್ಷಗಳು ಸಂಸತ್ತಿನಲ್ಲಿ ಒಟ್ಟುಗೂಡಿದರೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಬಹುದು ಎಂಬಲೆಕ್ಕಚಾರಚಂದ್ರಶೇಖರ್ ರಾವ್ ಅವರದಾಗಿದೆ. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರನ್ನುಹೈದರಾಬಾದಿನಲ್ಲಿಸನ್ಮಾನಿಸಲಿದ್ದಾರೆ. ನೀರು ಮತ್ತುಗಡಿವಿಚಾರದಲ್ಲಿ ಸೌಹಾರ್ದತೆಯ ಹೆಜ್ಜೆ ಹಾಕುವ ಯೋಚನೆ ಚಂದ್ರಶೇಖರ್ ರಾವ್ ಅವರದ್ದು.

ಲೋಕಸಭೆ ಚುನಾವಣೆಯಲ್ಲಿ ಟಿಆರ್ಎಸ್ ಪಕ್ಷ 9 ಸ್ಥಾನಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಚಂದ್ರಶೇಖರ್ ರಾವ್ ಅವರ ಕುಟುಂಬ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆ. 2007ರಲ್ಲಿ ಚಂದ್ರಶೇಖರ್ ರಾವ್ ಕುಟುಂಬ ತಿರುಮಲದ ವೆಂಕಟೇಶ್ವರ ದೇವರಿಗೆ ₹ 5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಸಮರ್ಪಣೆ ಮಾಡಿತ್ತು.

ರಾಜಶೇಖರ ರೆಡ್ಡಿ ಅಮಾನತು ಮಾಡಿದ್ದ ಅಧಿಕಾರಿ ಜಗನ್ ಆಡಳಿತದಲ್ಲಿ...

ಹೈದರಾಬಾದ್ ವಿಭಾಗದ ಐಜಿ ಸ್ಟಿಫನ್ರವೀಂದ್ರಅವರನ್ನು ಆಂಧ್ರಪ್ರದೇಶದ ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಮೂಲಗಳು ತಿಳಿಸಿವೆ.

ರವೀಂದ್ರ ಅವರ ನೇಮಕಅಂತಿಮವಾಗಿದೆಎನ್ನಲಾಗಿದೆ. ರವೀಂದ್ರ ಅವರು ಡ್ರಗ್ಸ್ ಮಾಫಿಯಾ ಮತ್ತು ನಕ್ಸಲರ ವಿರುದ್ಧ ಹಲವುಯಶಸ್ವಿಕಾರ್ಯಾಚರಣೆಗಳನ್ನು ನಡೆಸಿದ್ದಾರೆ.

ವಿಶೇಷ ಅಂದರೆ 2004ರಲ್ಲಿ ಜಗನ್ ಮೋಹನ್ ರೆಡ್ಡಿ ಅವರ ತಂದೆವೈ.ಎಸ್. ರಾಜಶೇಖರ್ ರೆಡ್ಡಿ ಅಧಿಕಾರದಲ್ಲಿದ್ದಾಗ ಸ್ಟಿಫನ್ ರವೀಂದ್ರ ಅವರನ್ನು ಅಮಾನತು ಮಾಡಿದ್ದರು. ಅಂದುಅಮಾನತುಗೊಂಡಿದ್ದಅಧಿಕಾರಿ ಜಗನ್ ಆಡಳಿತದಲ್ಲಿ ಪ್ರಮುಖವಾದ ಹುದ್ದೆಯನ್ನು ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.