ನವದೆಹಲಿ: ಆರ್.ಜಿ ಕರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ನ ಸುಳ್ಳು ಪತ್ತೆ ಪರೀಕ್ಷೆ ಪ್ರಕ್ರಿಯೆ ಕೋಲ್ಕತ್ತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜಯ್ ರಾಯ್ ಜತೆಗೆ ಇನ್ನೂ ಇಬ್ಬರು ವ್ಯಕ್ತಿಗಳು ಸಿಬಿಐ ಕಚೇರಿಯಲ್ಲಿ ಸುಳ್ಳುಪತ್ತೆ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸೇರಿದಂತೆ ನಾಲ್ವರು ಶನಿವಾರ ಸುಳ್ಳುಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪರೀಕ್ಷೆಯ ಮೂಲಕ ಸಿಗುವ ಮಾಹಿತಿಯನ್ನು ಸಾಕ್ಷ್ಯವಾಗಿ ಪರಿಗಣಿಸಲು ಕಾನೂನಿನ ಅಡಿ ಅವಕಾಶ ಇಲ್ಲ. ಆದರೆ, ಪರೀಕ್ಷೆಯ ಸಂದರ್ಭದಲ್ಲಿ ಆರೋಪಿಗಳು ನೀಡುವ ಮಾಹಿತಿಯು ತನಿಖಾಧಿಕಾರಿಗಳಿಗೆ ಮುಂದಡಿ ಇರಿಸುವುದಕ್ಕೆ ನೆರವಾಗುತ್ತದೆ.

ರಾಯ್ ಮತ್ತು ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸೇರಿದಂತೆ ಏಳು ಮಂದಿಯನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ನ್ಯಾಯಾಲಯದಿಂದ ಅನುಮತಿ ಕೋರಿತ್ತು. ಸುಳ್ಳುಪತ್ತೆ ಪರೀಕ್ಷೆ ನಡೆಸಲು ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲದ (ಸಿಎಫ್‌ಎಸ್‌ಎಲ್) ತಜ್ಞರ ತಂಡವು ಕೋಲ್ಕತ್ತಕ್ಕೆ ಆಗಮಿಸಿದ್ದು, ಪರೀಕ್ಷೆ ನಡೆಸುತ್ತಿದೆ.

ಆಗಸ್ಟ್ 9ರಂದು (ಘಟನೆ ನಡೆದ ದಿನ) ರಾತ್ರಿ ಪಾಳಿಯಲ್ಲಿದ್ದ ವೈದ್ಯರು ಮತ್ತು ಇಬ್ಬರು ಮೊದಲ ವರ್ಷದ ಸ್ನಾತಕೋತ್ತರ ಟ್ರೈನಿಗಳು ಸುಳ್ಳುಪತ್ತೆ ಪರೀಕ್ಷೆಗೆ ಒಳಗಾದವರಲ್ಲಿ ಸೇರಿದ್ದಾರೆ. ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ಟ್ರೈನಿಗಳ ಬೆರಳಚ್ಚು ಪತ್ತೆಯಾಗಿರುವುದು ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಕಾರಣ.
.ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಪ್ರಮುಖ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.