ಕೋಟಾ (ರಾಜಸ್ಥಾನ): ಶಿವರಾತ್ರಿ ಸಂದರ್ಭದಲ್ಲಿ ‘ಶಿವ ಭಾರತ’ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ವಿದ್ಯುದಾಘಾತದಿಂದ ಗಂಭೀರವಾಗಿ ಗಾಯಗೊಂಡಿದದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಗನ್ (13) ಮೃತ ಬಾಲಕ. ಗಾಯಗೊಂಡಿದ್ದ ನಾಲ್ವರು ಮಕ್ಕಳ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಾವಿನ ಬೆನ್ನಲ್ಲೇ ಮೆರವಣಿಗೆ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಮಾರು 20 ಜನರು, 18 ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 22 ಅಡಿ ಉದ್ದದ ಕಬ್ಬಿಣದ ಧ್ವಜಕಂಬವನ್ನು ಬಾಲಕನೊಬ್ಬ ಹಿಡಿದಿದ್ದ. ಆ ಧ್ವಜದ ಮೇಲ್ಭಾಗವು ಹೈ ಟೆನ್ಷನ್ ತಂತಿಗೆ ತಗುಲಿದಾಗ ವಿದ್ಯುದಾಘಾತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.