ಚೆನ್ನೈ: ದ್ರಾವಿಡ ಪಕ್ಷಗಳ ಜಯದ ಓಟ ತಮಿಳುನಾಡಿನಲ್ಲಿ ಮುಂದುವರೆದಿದೆ. ಆಡಳಿತಪಕ್ಷ ಡಿಎಂಕೆ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ‘ಇಂಡಿಯಾ’ ಕೂಟದ ಕೈ ಬಲಪಡಿಸಿದೆ. ರಾಜ್ಯದ ಒಟ್ಟು 39 ಕ್ಷೇತ್ರಗಳಲ್ಲಿಯೂ ‘ಇಂಡಿಯಾ’ ಕೂಟವು ಗೆಲುವಿನ ನಗೆಬೀರಿದೆ.

ಎಂ.ಕೆ.ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ 22 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿದೆ. ಇನ್ನು ‘ಇಂಡಿಯಾ’ ಕೂಟದ ಮಿತ್ರಪಕ್ಷಗಳ ಪೈಕಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ವಿಸಿಕೆ 2, ಸಿಪಿಐ 2, ಸಿಪಿಎಂ 2 ಮತ್ತು ಎಂಡಿಎಂಕೆ ಒಂದು ಸ್ಥಾನ ಗಳಿಸಿದೆ.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ರಾಜ್ಯದಲ್ಲಿ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು, ಉಳಿದ ಕ್ಷೇತ್ರಗಳನ್ನು ಪಿಎಂಕೆ, ತಮಿಳು ಮನಿಲಾ ಕಾಂಗ್ರೆಸ್ ಮತ್ತು ತನ್ನ ಇತರ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿತ್ತು. ಅದೇ ರೀತಿ ಎಐಎಡಿಎಂಕೆ 32 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಉಳಿದ ಸ್ಥಾನಗಳ ಪೈಕಿ ಮಿತ್ರಪಕ್ಷಗಳಾದ ಡಿಎಂಡಿಕೆಗೆ 5, ಪಿಟಿ ಹಾಗೂ ಎಸ್ಡಿಪಿಐ ಪಕ್ಷಗಳಿಗೆ ತಲಾ ಒಂದು ಸ್ಥಾನ ಬಿಟ್ಟುಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.