ಭೋಪಾಲ್: ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲಿನ ಬೋಗಿಗಳ ಕೊಂಡಿ ಕಳಚಿ ಬೇರ್ಪಟ್ಟಿರುವ ಘಟನೆ ಮಧ್ಯಪ್ರದೇಶದ ಪಶ್ಚಿಮ ಸೆಂಟ್ರಲ್ ರೈಲ್ವೆಯ ಜಬಲ್ಪುರ ವಿಭಾಗದಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಕಲಬುರಗಿ– ಬೆಂಗಳೂರು: ವಿಶೇಷ ಎಕ್ಸ್ಪ್ರೆಸ್ ರೈಲು.
ರೈಲಿನ ಎರಡು ಕೋಚ್ಗಳನ್ನು ಬಂಧಿಸುವ ಕೊಂಡಿ ಕಳಚಿದೆ. ಕಂತಿ ಹಾಗೂ ಬಿನಾ ರೈಲು ನಿಲ್ದಾಣಗಳ ನಡುವೆ ಘಟನೆ ಜರುಗಿದೆ ಎಂದು ಅವರು ತಿಳಿಸಿದ್ದಾರೆ.

‘ಘಟನೆಯಿಂದಾಗಿ ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಕಲ್ಲಿದ್ದಲು ತುಂಬಿಕೊಂಡು ಉತ್ತರ ಪ್ರದೇಶದ ಆಗ್ರಾಕ್ಕೆ ರೈಲು ತೆರಳುತ್ತಿತ್ತು. ಸಮಸ್ಯೆ ಬಗೆಹರಿಸಲಾಗಿದ್ದು, ರೈಲು ಗಮ್ಯದ ಕಡೆಗೆ ಹೊರಟಿದೆ’ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀವತ್ಸವ ತಿಳಿಸಿದ್ದಾರೆ.
.1,426 ಕಿ.ಮೀ ರೈಲು ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲ್ ಅಳವಡಿಕೆ: ಸಚಿವ ಸೋಮಣ್ಣ.
ಕೊಂಡಿ ಕಳಚಿದ ಬಳಿಕ ರೈಲು ಎಂಜಿನ್ 100 ಮೀಟರ್ಗೂ ಅಧಿಕ ದೂರ ಚಲಿಸಿದೆ. ರೈಲಿನ ವ್ಯವಸ್ಥಾಪಕಾಧಿಕಾರಿ ಲೊಕೊ ಪೈಲಟ್ಗೆ ವಾಕಿಟಾಕಿ ಮೂಲಕ ವಿಷಯ ತಿಳಿಸಿದ ಬಳಿಕ ರೈಲು ನಿಲ್ಲಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
.ಸಂಪಾದಕೀಯ | ಮತ್ತೊಂದು ರೈಲು ಅಪಘಾತ; ಉತ್ತರದಾಯಿತ್ವದ ಕೊರತೆ ತೀವ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.