ಮಂಡ್ಲಾ, ಮಧ್ಯಪ್ರದೇಶ: ಇತರ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ಜನರಿಗೆ ನ್ಯಾಯ ಒದಗಿಸಲು ಜಾತಿಗಣತಿ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಇಲ್ಲಿ ಆಗ್ರಹಿಸಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿಯ 18 ವರ್ಷಗಳ ಆಡಳಿತಾವಧಿಯಲ್ಲಿ 250 ಹಗರಣಗಳು ನಡೆದಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಹರಿಸಿದರು.

ಮಂಡ್ಲಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಬಿಹಾರದಲ್ಲಿ ಇತ್ತೀಚೆಗೆ ನಡೆದ ಜಾತಿಗಣತಿ ಪ್ರಕಾರ ಆ ರಾಜ್ಯದಲ್ಲಿ ಒಬಿಸಿಗಳು, ಎಸ್‌ಸಿ, ಎಸ್‌ಟಿ ವರ್ಗದವರು ಶೇ 84ರಷ್ಟು ಇದ್ದಾರೆ. ಆದರೆ ಉದ್ಯೋಗಗಳಲ್ಲಿ ಅವರ ಸಂಖ್ಯೆ ಕಡಿಮೆ ಇದೆ. ಅವರ ನಿಖರ ಸಂಖ್ಯೆ ತಿಳಿಯಲು ಮತ್ತು ಅವರಿಗೆ ನ್ಯಾಯ ಒದಗಿಸಲು ರಾಷ್ಟ್ರದಲ್ಲಿ ಜಾತಿಗಣತಿ ನಡೆಯಬೇಕು‘ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹಳೆಯ ಪಿಂಚಣಿ ಪದ್ಧತಿ ಜಾರಿ ಸೇರಿದಂತೆ ಹಲವು ಯೋಜನೆಗಳ ಜಾರಿ ಬಗ್ಗೆ ಆಶ್ವಾಸನೆ ನೀಡಿದರು. ಅಲ್ಲದೆ, 1–12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಜೊತೆಗೆ, 1–8ನೇ ತರಗತಿವರೆಗಿನ ಮಕ್ಕಳಿಗೆ ತಿಂಗಳಿಗೆ ₹ 500 ಮತ್ತು 9–10ನೇ ತರಗತಿ ಮಕ್ಕಳಿಗೆ ₹ 1000 ಮತ್ತು 11–12ನೇ ತರಗತಿ ವಿದ್ಯಾರ್ಥಿಗಳಿಗೆ ₹1500 ನೆರವು ನೀಡುವುದಾಗಿ ಭರವಸೆ ನೀಡಿದರು.

₹ 500ಕ್ಕೆ ಅಡುಗೆ ಅನಿಲ, ಮಹಿಳೆಯರಿಗೆ ಮಾಸಿಕ ₹1500, 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು 200 ಯೂನಿಟ್ ಬಳಕೆಗೆ ಅರ್ಧ ದರ, ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ, ಸಾಲಮನ್ನಾ ಯೋಜನೆ ಜಾರಿಗೆ ತರುವುದಾಗಿ ಮತ್ತು ಜಾತಿಗಣತಿ ನಡೆಸುವುದಾಗಿಯೂ ಹೇಳಿದರು.

ಮಾಜಿ ಪ್ರಧಾನಿ, ತಮ್ಮ ಅಜ್ಜಿ ಇಂದಿರಾಗಾಂಧಿ ಅವರನ್ನು ಸ್ಮರಿಸಿದ ಅವರು, ‘ನಾನು ಕೆಲಮಟ್ಟಿಗೆ ಅವರನ್ನು ಹೋಲುತ್ತೇನೆ. ಇದರಿಂದ ಜನರಿಗಾಗಿ ವಿಶೇಷವಾಗಿ ಬುಡಕಟ್ಟು ಜನರಿಗಾಗಿ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಿದೆ’ ಎಂದರು.

ಮಧ್ಯಪ್ರದೇಶದಲ್ಲಿ ನ. 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.