ಇಂದೋರ್ (ಮಧ್ಯ ಪ್ರದೇಶ): ಪ್ರೇಮ ವೈಫಲ್ಯ ಅನುಭವಿಸಿದ್ದ 27 ವರ್ಷದ ನರ್ಸ್‌ವೊಬ್ಬರು ತಮಗೆ ತಾವೇ ಓವರ್‌ಡೋಸ್ ಅನಸ್ತೇಷಿಯಾ (ಅರವಳಿಕೆ) ಚುಚ್ಚುಮದ್ದು ನೀಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದಲ್ಲಿ ವರದಿಯಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಬೇರೆ ಮಹಿಳೆಯನ್ನು ಮದುವೆಯಾದ ಪ್ರಿಯಕರ; ಓವರ್‌ಡೋಸ್ ಅನಸ್ತೇಷಿಯಾ ಪಡೆದು ನರ್ಸ್ ಆತ್ಮಹತ್ಯೆ

'ಪೂಜಾ ಗಂಜನ್ ಎಂಬುವವರು ತಮ್ಮ ಮನೆಯಲ್ಲಿಯೇ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ನೀಡಲಾಗಿದೆ' ಎಂದು ಎರೋಡಮ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂಜಯ್ ಶುಕ್ಲಾ ಮಾಹಿತಿ ನೀಡಿದ್ದಾರೆ.

'ಆತ್ಮಹತ್ಯೆಗೂ ಮುನ್ನ ಎರಡು ಪುಟಗಳ ಡೆತ್ ನೋಟ್ ಬರೆದಿರುವ ಪೂಜಾ, ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಸಹೋದ್ಯೋಗಿಯೊಬ್ಬರೊಂದಿಗೆ ರಿಲೇಷನ್‌ಷಿಪ್‌ನಲ್ಲಿ ಇದ್ದುದಾಗಿ ಹಾಗೂ ಕೆಲದಿನಗಳ ಬಳಿಕ ಮತ್ತೊಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಆತ, ಬೇರೊಬ್ಬ ಮಹಿಳೆಯನ್ನು ಮದುವೆ ಮಾಡಿಕೊಂಡ ಎಂಬುದಾಗಿ ಉಲ್ಲೇಖಿಸಿದ್ದಾರೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಟಿಎಂಸಿ ಕಾರ್ಯಕರ್ತ ಸಾವು

'ನಮ್ಮ ಮನೆಯವರು ಬೇರೊಬ್ಬರೊಂದಿಗೆ ಮದುವೆ ನಿಶ್ಚಯ ಮಾಡಿದ್ದಾರೆ. ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಸಂಬಂಧದಲ್ಲಿ ಇದ್ದ ಸಂದರ್ಭದಲ್ಲಿಯೇ ಪೂಜಾಳಿಗೆ ಸ್ಪಷ್ಟವಾಗಿ ಹೇಳಿದ್ದೆ' ಎಂಬುದಾಗಿ ಆಕೆಯ ಪ್ರಿಯಕರ ಹೇಳಿಕೆ ನೀಡಿರುವುದಾಗಿಯೂ ಅಧಿಕಾರಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.