ಭೋಪಾಲ್: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದೆ. ಆದರೆ, ಗೃಹ ಸಚಿವ ನರೋತ್ತಮ್ ಮಿಶ್ರಾ ಸೇರಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದ 12 ಸಚಿವರು ಪರಾಭವಗೊಂಡಿದ್ದಾರೆ.

ದಾತಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನರೋತ್ತಮ್ ಮಿಶ್ರಾ, ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಭಾರ್ತಿ ವಿರುದ್ಧ 7,742 ಮತಗಳ ಅಂತರದಿಂದ ಸೋತಿದ್ದಾರೆ.

ಅಟೆರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಅರವಿಂದ ಭಡೋರಿಯಾ, ಹರ್ದಾದ ಕಮಲ್ ಪಟೇಲ್ ಮತ್ತು ಬಾಲಾಘಾಟ್ನಿಂದ ಸ್ಪರ್ಧಿಸಿದ್ದ ಗೌರಿಶಂಕರ್ ಬಿಸೆನ್ ಸೋಲನ್ನು ಅನುಭವಿಸಿದ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.

ಬದ್ವಾನಿಯಿಂದ ಪ್ರೇಮ್ ಸಿಂಗ್ ಪಟೇಲ್, ಬಮೋರಿಯಿಂದ ಮಹೇಂದ್ರ ಸಿಂಗ್ ಸಿಸೋಡಿಯಾ, ಬದ್ನಾವರ್ನಿಂದ ರಾಜವರ್ಧನ್ ಸಿಂಗ್ ದತ್ತಿಗಾಂವ್, ಗ್ವಾಲಿಯರ್ ಗ್ರಾಮಾಂತರದಿಂದ ಭರತ್ ಸಿಂಗ್ ಕುಶ್ವಾಹಾ, ಅಮರಪತನ್ನಿಂದ ರಾಮ್ಖೇಲವಾನ್ ಪಟೇಲ್ ಮತ್ತು ಪೊಹ್ರಿಯಿಂದ ಸುರೇಶ್ ಧಕಡ್ ವಿಜೇತ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.

ಸಿಸೋಡಿಯಾ ಮತ್ತು ದತ್ತಿಗಾಂವ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತರಾಗಿದ್ದಾರೆ. ದತ್ತಿಗಾಂವ್ ಅವರನ್ನು ಭನ್ವರ್ ಸಿಂಗ್ ಶೇಖಾವತ್ ಸೋಲಿಸಿದರು, ಶೇಖಾವತ್ ಅವರು ಮೊದಲು ಬಿಜೆಪಿಯಲ್ಲಿದ್ದು, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದರು.

ಇದಲ್ಲದೆ, ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಸೋದರಳಿಯ ರಾಹುಲ್ ಸಿಂಗ್ ಲೋಧಿ ಸೇರಿದಂತೆ, ಪರಸ್ವಾಡದಿಂದ ಕಣಕ್ಕಿಳಿದಿದ್ದ ಸಚಿವ ರಾಮ್ ಕಿಶೋರ್ ಕಾವ್ರೆ ಕೂಡ ಸೋಲು ಕಂಡಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ತಮ್ಮ ತವರು ಪ್ರದೇಶವಾದ ಚಿಂದ್ವಾರದಿಂದ ಸ್ಪರ್ಧಿಸಿದ್ದು, ಬಿಜೆಪಿಯ ವಿವೇಕ್ ಬಂಟಿ ಸಾಹು ಅವರನ್ನು 36,594 ಮತಗಳಿಂದ ಸೋಲಿಸಿದರು.

ಬಿಜೆಪಿಯಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೀಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯ ಗೆಲುವು ಸಾಧಿಸಿದ್ದಾರೆ. ಚೌಹಾಣ್ ಬುಧ್ನಿ ಕ್ಷೇತ್ರದಿಂದ ಆರನೇ ಬಾರಿಗೆ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.