ಪುಣೆ: ಇಲ್ಲಿನ ರಾಜೀವ್ ಗಾಂಧಿ ಮೃಗಾಲಯದಲ್ಲಿ ಗುರುವಾರ ಬೀದಿ ನಾಯಿಗಳ ದಾಳಿಯಿಂದ ಅಘಾತಗೊಂಡ ನಾಲ್ಕು ಕೃಷ್ಣಮೃಗಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಂದು ಕೃಷ್ಣಮೃಗ ತೀವ್ರವಾಗಿ ಗಾಯಗೊಂಡಿದೆ.

ಪುಣೆಯ ಕತ್ರಾಜ್‌ನಲ್ಲಿರುವ ಮೃಗಾಲಯದಲ್ಲಿಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಮೃಗಾಲಯದ ನಿರ್ದೇಶಕ ರಾಜ್‌ಕುಮಾರ್ ಜಾಧವ್ ತಿಳಿಸಿದ್ದಾರೆ.

ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1ರ ಅಡಿಯಲ್ಲಿ ಕೃಷ್ಣಮೃಗಗಳು ಸಂರಕ್ಷಿತ ಪ್ರಾಣಿಗಳಾಗಿವೆ. ಕೆಲವು ಬೀದಿ ನಾಯಿಗಳು ಕಣ್ತಪ್ಪಿಸಿ ಮೃಗಾಲಯಕ್ಕೆ ನುಸುಳಿ ಬಂದು, ಕೃಷ್ಣಮೃಗಗಳಿರುವ ಆವರಣದೊಳಗೆ ಸಿಲುಕಿಕೊಂಡವು. ಈ ನಾಯಿಗಳ ದಾಳಿಯಿಂದ ಅಘಾತಗೊಂಡ ನಾಲ್ಕು ಕೃಷ್ಣಮೃಗಗಳು (ಎರಡು ಗಂಡು, ಎರಡು ಹೆಣ್ಣು) ಸ್ಥಳದಲ್ಲೇ ಮೃತಪಟ್ಟವು‘ಎಂದು ಅವರು ವಿವರಿಸಿದರು. ಒಂದು ನಾಯಿಯ ಕೋರೆಹಲ್ಲಿನಿಂದ ಕೃಷ್ಣಮೃಗವನ್ನು ಕಚ್ಚಿದ್ದರಿಂದ, ಅದಕ್ಕೆ ತೀವ್ರಗಾಯವಾಗಿದೆ‘ ಎಂದು ಅವರು ಹೇಳಿದರು.

ಮೃಗಾಲಯದ ಒಂದು ಭಾಗದಲ್ಲಿ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆ ಭಾಗದಿಂದ ನಾಯಿಗಳು ನುಸುಳಿ ಬಂದಿರಬಹುದು ಎಂದು ಜಾಧವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೃಗಾಲಯದಲ್ಲಿ ಒಟ್ಟು ಮೂವತ್ನಾಲ್ಕು ಕೃಷ್ಣಮೃಗಗಳಿದ್ದವು. ಈಗ ನಾಲ್ಕು ಸಾವನ್ನಪ್ಪಿದ್ದ ನಂತರ, ಮೂವತ್ತು ಉಳಿದಿವೆ. ಘಟನೆಯ ಬಗ್ಗೆ ವರದಿಯನ್ನು ಪುಣೆ ಮಹಾನಗರ ಪಾಲಿಕೆಗೆ ಕಳುಹಿಸುವುದಾಗಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.