ಚೆನ್ನೈ: ಅಣ್ಣಾ ಸಮಾಧಿ ಸಮೀಪವೇ ಕರುಣಾನಿಧಿ ಅವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲು ತಮಿಳುನಾಡು ಸರ್ಕಾರ ನಿರಾಕರಿಸಿದ ಬೆನ್ನಲೇ ರಾಜ್ಯದ ಹಲವೆಡೆ ಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ.

ಎರಡು ದಿನಗಳಿಂದ ಕಾವೇರಿ ಆಸ್ಪತ್ರೆಯ ಮುಂದೆ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಕರುಣಾನಿಧಿ ಅವರ ಅಭಿಮಾನಿಗಳು ನೆಚ್ಚಿನ ನಾಯಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕಣ್ಣೀರ ಕಟ್ಟೆಯೊಡೆದು ರೋದಿಸಿದರು. ರಕ್ತಸಂಬಂಧಿಯನ್ನೇ ಕಳೆದುಕೊಂಡಂತಹ ದುಃಖ ತೀವ್ರತೆ, ಎದೆಬಡಿದುಕೊಂಡು ಅಳುತ್ತಿದ್ದ ಹೆಂಗಸರು, ಕೊನೆಯ ಬಾರಿಗೆ ಕಲೈಂಗರ್ನನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಜನಸ್ತೋಮ...ಈ ಕ್ಷಣಗಳು ದ್ರಾವಿಡ ಸೂರ್ಯ ತಮಿಳುನಾಡು ಮತ್ತು ಜನರಿಗಾಗಿ ಮೀಸಲಿಟ್ಟ ಬದುಕಿನ ಕಥೆ ಹೇಳುವಂತಿತ್ತು.

ಕರುಣಾನಿಧಿ ಅವರ ನಿಧನ ಸುದ್ದಿ ಕೇಳಿ ನಾಗಪಟ್ಟಿನಂ ಮತ್ತು ಮಯಿಲಾದುಥಿರೈನ ಸುಬ್ರಮಣಿಯನ್ ಹಾಗೂ ರಾಜೇಂದ್ರನ್ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹಿಂದುಸ್ತಾನ್ಟೈಮ್ಸ್ ವರದಿ ಮಾಡಿದೆ. ಮೃತರು ಸುಮಾರು ಐವತ್ತು ವರ್ಷ ವಯೋಮಾನವವರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಟ ರಜನಿಕಾಂತ್ ಸೇರಿ ಹಲವು ಗಣ್ಯರು ಗೋಪಾಲಪುರಂ ನಿವಾಸದಲ್ಲಿ ಕರುಣಾನಿಧಿ ಅವರ ಅಂತಿಮ ದರ್ಶನ ಪಡೆದರು.

ಬುಧವಾರ ಸಂಜೆ ಅಂತ್ಯ ಕ್ರಿಯೆ ನಡೆಯಲಿದ್ದು, ಸಮಾಧಿ ಮಾಡುವ ಸ್ಥಳ ಇನ್ನು ನಿರ್ಧಾರವಾಗಿಲ್ಲ. ಮರೀನಾ ಬೀಚ್ನಲ್ಲಿಯೇ ಅವಕಾಶ ನೀಡುವಂತೆ ಪ್ರತಿಭಟನೆಯ ಜತೆಗೆ ಮದ್ರಾಸ್ ಹೈಕೋರ್ಟ್ಗೂ ಮನವಿ ಸಲ್ಲಿಸಲಾಗಿದೆ. ಗೋಪಾಪುರಂ ನಿವಾಸದಿಂದ ಮಧ್ಯರಾತ್ರಿ 1 ಗಂಟೆಯಿಂದ 3ರವರೆಗೂ ಸಿಐಟಿ ಕಾಲೋನಿ ನಿವಾಸದಲ್ಲಿ ಪಾರ್ಥೀವ ಶರೀರ ಇರಿಸಲಾಗುತ್ತದೆ. ಬೆಳಗಿನ ಜಾವ 4 ಗಂಟೆಯಿಂದ ರಾಜಾಜಿ ಹಾಲ್ನಲ್ಲಿ ಸಾರ್ವಜನಿಕರಿಗೆ ಕರುಣಾನಿಧಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬದುಕಿನ ಹಾದಿ

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ

‘ಅಣ್ಣಾ ಸಮಾಧಿ’ ಸಮೀಪ ಕರುಣಾನಿಧಿ ಅಂತ್ಯ ಕ್ರಿಯೆಗೆ ಒಪ್ಪದ ತಮಿಳುನಾಡು ಸರ್ಕಾರ

ಕರುಣಾನಿಧಿಗೆ ಉಂಟು ರಾಮನಗರದ ನಂಟು

ಕರುನಾಡ ಜತೆಗೆ ಕಾರುಣ್ಯದ ‘ನಿಧಿ’

’ಕರುಣಾನಿಧಿ’ ಗೌರವಾರ್ಥ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.