ತ್ರಿಶೂರ್: ಕೇರಳದ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಇಸ್ಲಾಂ ಸಂಘಟನೆಯೊಂದು 'ಲಿಂಗ ರಾಜಕೀಯ' ಕುರಿತು ತರಗತಿ ನಡೆಸಿದ್ದು, ಒಂದೇ ಕೊಠಡಿಯಲ್ಲಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕಗೊಳಿಸಲು ಅವರ ನಡುವೆ ಪರದೆ ಕಟ್ಟಿ ವಿವಾದಕ್ಕೆ ಗುರಿಯಾಗಿದೆ.

‘ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು’, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ)’, ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ಮತ್ತು ಇತರರು ಇಸ್ಲಾಂ ಸಂಘಟನೆಯ ಈ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿವೆ.

‘ಮುಜಾಹಿದ್ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್’ ಎಂಬ ಸಂಘಟನೆಯು ‘ಇಸ್ಲಾಮಿಕ್ ದೃಷ್ಟಿಕೋನದಿಂದ ಎಲ್ಜಿಬಿಟಿಕ್ಯುಐಎ+ ಅನ್ನು ಅರ್ಥಮಾಡಿಕೊಳ್ಳುವುದು’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ತರಗತಿಗಳನ್ನು ನಡೆಸಿದೆ.

ತರಗತಿ ನಡೆಸಿದ ಸಂಘಟನೆಯ ಪದಾಧಿಕಾರಿಯೊಬ್ಬರು ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ವಿದ್ಯಾರ್ಥಿಗಳ ನಡುವೆ ಕಟ್ಟಲಾಗಿದ್ದ ಪರದೆಯು ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಕೇರಳದಲ್ಲಿ ವಿವಾದ ಉಂಟಾಗಿದೆ.

ತರಗತಿಯ ವೆಚ್ಚವನ್ನು ನಾವೇ ಬರಿಸಿದ್ದೇವೆ ಎಂದು ಸಂಘಟನೆ ಹೇಳಿದೆ. ಅಲ್ಲದೇ, ಪುರುಷ ಮತ್ತು ಮಹಿಳೆಯನ್ನು ಪ್ರತ್ಯೇಕಗೊಳಿಸುವ ದೃಷ್ಟಿಕೋನದಿಂದಲೇ ಪರದೆ ಕಟ್ಟಲಾಗಿದೆ ಎಂದಿದೆ.

‘ತರಗತಿಯ ವಿರುದ್ಧ ವ್ಯಕ್ತವಾಗಿರುವ ಟೀಕೆಗಳನ್ನು ಉಪೇಕ್ಷಿಸುವುದಾಗಿ ಸಂಘಟನೆಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಎಫ್ಐ ರಾಜ್ಯಾಧ್ಯಕ್ಷೆ ಅನುಶ್ರೀ, ‘ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇಂತಹ ಅಭಿಯಾನದ ಭಾಗವಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಎಸ್ಎಫ್ಐ ಇದನ್ನು ದೊಡ್ಡ ಸವಾಲಾಗಿ ಪರಿಗಣಿಸುತ್ತದೆ’ ಎಂದು ಹೇಳಿದರು.

‘ತರಗತಿ ನಡೆಸಿದವರು ಪರದೆಯ ಬಗ್ಗೆ ಯಾಕೆ ಸೂಕ್ತ ವಿವರಣೆ ನೀಡಿಲ್ಲ. ತರಗತಿಗೆ ಹಾಜರಾದವರು ಪರದೆಯ ಬಗ್ಗೆ ಏಕೆ ಪ್ರಶ್ನೆ ಮಾಡಿಲ್ಲ’ ಎಂದು ಕೇರಳದ ‘ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು’ ಪ್ರಶ್ನಿಸಿದೆ.

ಲಿಂಗ ರಾಜಕೀಯದ ಕುರಿತ ತರಗತಿಯಲ್ಲಿ ವಿದ್ಯಾರ್ಥಿಗಳ ನಡುವೆ ಪರದೆ ಕಟ್ಟಿದ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಖಂಡನೆ ವ್ಯಕ್ತವಾದದರೂ, ತನ್ನ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.

ಇನ್ನು ತರಗತಿ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ವಿದ್ಯಾರ್ಥಿಗಳ ಒಕ್ಕೂಟ, ‘ಸರ್ಕಾರಿ ವೈದ್ಯಕೀಯ ಕಾಲೇಜು ಆವರಣದಲ್ಲಿ ತರಗತಿ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಧರ್ಮವು ವೈಯಕ್ತಿಕ ವಿಷಯ. ಧರ್ಮವನ್ನು ಆರಾಧಿಸುವ ಜನರು ಆಯೋಜಿಸುವ ತರಗತಿಗಳಿಗೂ, ಕಾಲೇಜಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇಂತಹ ತರಗತಿಗಳನ್ನು ನಡೆಸುವಲ್ಲಿ ಕಾಲೇಜು ಆಡಳಿತ ಅಥವಾ ಕಾಲೇಜು ಒಕ್ಕೂಟ ಯಾವುದೇ ಪಾತ್ರ ಹೊಂದಿಲ್ಲ. ಕಾಲೇಜು ಇಂತಹ ಕೆಲಸಗಳಿಗೆ ಪ್ರೋತ್ಸಾಹಿಸುವುದಿಲ್ಲ. ನಾವು ಯಾವಾಗಲೂ ಪ್ರಗತಿಪರ ಆಲೋಚನೆಗಳ ಪರವಾಗಿ ನಿಲ್ಲುತ್ತೇವೆ, ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.