ಕೊಲ್ಕತ್ತ: ಕಳೆದ ಐದು ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿಫಲವಾಗಿರುವಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಮಮತಾ ಬ್ಯಾನರ್ಜಿ, ಜನರು ಮೂರ್ಖರಲ್ಲ ಎಂದಿದ್ದಾರೆ.

ಯೋಧರು ಮತ್ತು ಹುತಾತ್ಮರ ಹೆಸರಲ್ಲಿ ಮತಯಾಚನೆ ಮಾಡಿದ್ದಕ್ಕೆ ಮೋದಿ ವಿರುದ್ಧ ಗುಡುಗಿದ ಮಮತಾ, ಭಾರತೀಯ ಸೇನೆ ಭಾರತದ ಪ್ರತಿಯೊಬ್ಬ ಪ್ರಜೆಗೆ ಸೇರಿದ್ದು, ಅದು ಬಿಜೆಪಿ ಅಥವಾ ಮೋದಿಗೆ ಸೇರಿದ್ದು ಅಲ್ಲ ಎಂದಿದ್ದಾರೆ.

ಇಲ್ಲಿನ ಉತ್ತರ್ ದಿನಜ್ಪುರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಲ್ಲ.ಆದರೆ ಚುನಾವಣೆ ಬಂದಾಗ ಅವರು ಆ ವಿಷಯವನ್ನು ಮತ್ತೆ ಮೇಲೆತ್ತುತ್ತಾರೆ.ಜನರೇನೂ ಮೂರ್ಖುರಲ್ಲ.ಪ್ರತಿ ಬಾರಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.

ದೇಶದ ಎಲ್ಲ ಧರ್ಮದವರ ಬಗ್ಗೆಯೂ ನನಗೆ ಗೌರವ ಇದೆ. ಯೋಧರ ಮತ್ತು ಹುತಾತ್ಮರ ಹೆಸರಲ್ಲಿ ಮತ ಕೇಳಲು ಮೋದಿಗೆ ನಾಚಿಕೆಯಾಗಬೇಕು. ಭಾರತೀಯ ಸೇನೆ ನಮ್ಮ ಹೆಮ್ಮೆ. ದಾಳಿ ಬಗ್ಗೆ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದರೂ ಪುಲ್ವಾಮ ದಾಳಿ ನಡೆದಿದ್ದು ಹೇಗೆ ಎಂಬುದಕ್ಕೆ ಮೋದಿ ಮೊದಲು ಉತ್ತರಿಸಬೇಕು ಎಂದಿದ್ದಾರೆ.

ಮೋದಿ ಮತ್ತು ಶಾ ಅವರನ್ನುಮಹಾಭಾರತದ ದುರ್ಯೋಧನ ಮತ್ತು ದುಶ್ಯಾಸನರಿಗೆಎಂದು ಹೋಲಿಸಿದ ಮಮತಾ, ಈ ಜೋಡಿದೇಶದ ಸ್ವಾತಂತ್ರ್ಯವನ್ನೇ ದೋಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.