ಮುಂಬೈ: ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹ್ನವಿ ಮರಾಠೆ ಹಾಗೂ ಸಾಗರ್ ಪಾಟೀಲ್ ಎಂಬಿಬ್ಬರನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಇವರು ಹೋರ್ಡಿಂಗ್ ನಿರ್ಮಾಣ ಸಂಸ್ಥೆ ಎಗೊ ಮಿಡಿಯಾ ಪ್ರೈವೆಟ್ ಲಿಮಿಟೆಡ್‌ಗೆ ಸಂಬಂಧಿಸಿದವರು. ಅಲ್ಲಿಗೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
.ICC World Cup 2023 | ಬಲವಾದ ಗಾಳಿ: ಕಳಚಿ ಬಿದ್ದ ಏಕನಾ ಕ್ರೀಡಾಂಗಣದ ಹೋರ್ಡಿಂಗ್.
ಕಳೆದ ವರ್ಷ ಡಿಸೆಂಬರ್‌ವರೆಗೂ ಸಂಸ್ಥೆಯ ಜೊತೆ ನಿರ್ದೇಶಕರಾಗಿದ್ದ ಮರಾಠೆ, ಈ ಹೋರ್ಡಿಂಗ್ ಸಂಬಂಧ ಹಣಕಾಸು ಲಾಭಗಳನ್ನು ಪಡೆದುಕೊಂಡಿದ್ದರು. ಪಾಟೀಲ್ ಈ ಹೋರ್ಡಿಂಗ್‌ನ ಗುತ್ತಿಗೆದಾರರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಎಗೊ ಮಿಡಿಯಾ ಸಂಸ್ಥೆಯ ನಿರ್ದೇಶಕ ಭವೇಶ್ ಕುಮರ್ ಹಾಗೂ ಸ್ಟ್ರಕ್ಚರಲ್ ಎಂಜಿನಿಯರ್ ಮನೋಜ್ ಸಂಘು ಅವರನ್ನು ಅವರನ್ನು ಬಂಧಿಸಲಾಗಿತ್ತು.
.ಮುಂಬೈ ಜಾಹೀರಾತು ಫಲಕ ಅವಘಡ: ಎಂಜಿನಿಯರ್ ಪೊಲೀಸ್ ವಶಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.