ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಾಯಕತ್ವದ ಕುರಿತ ಮಹಾಪ್ರಬಂಧಕ್ಕೆ ಮುಸ್ಲಿಂ ಸಂಶೋಧಕಿ ನಜ್ಮಾ ಪರ್ವಿನ್ ಎಂಬುವವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ.

ವಾರಾಣಸಿಯ ಲಲ್ಲಾಪುರದ ನಿವಾಸಿಯಾಗಿರುವ ನಜ್ಮಾ, ಬನಾರಸ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದರು. ‘ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವ: ಒಂದು ವಿಶ್ಲೇಷಣಾತ್ಮಕ ಅಧ್ಯಯನ' ವಿಷಯದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಆ ಮೂಲಕ ಮೋದಿ ಕುರಿತು ಸಂಶೋಧನೆ ನಡೆಸಿದ ದೇಶದ ಮೊದಲ ಮುಸ್ಲಿಂ ಮಹಿಳೆಯಾಗಿದ್ದಾರೆ. ಸಂಶೋಧನೆಯಲ್ಲಿ ಮೋದಿ ಅವರನ್ನು ರಾಜಕೀಯದ ‘ಮೆಗಾಸ್ಟಾರ್‘ ಎಂದು ಬಣ್ಣಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್, ಬಿಎನ್ಎನ್, ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

‘ಪ್ರಬಂಧವನ್ನು 5 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಸಂಶೋಧನೆಯ ವೇಳೆ 20 ಹಿಂದಿ ಪುಸ್ತಕಗಳು, ಮೋದಿ ಅವರ ಜೀವನಚರಿತ್ರೆ ಸೇರಿದಂತೆ 79 ಇಂಗ್ಲಿಷ್ ಪುಸ್ತಕಗಳನ್ನು ಅಧ್ಯಯನ ಮಾಡಿ ಮಹಾಪ್ರಬಂಧ ಹೊರತಂದಿದ್ದೇನೆ’ ಎಂದು ನಜ್ಮಾ ಹೇಳಿಕೊಂಡಿದ್ದಾರೆ.

‘ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ‘ಗುಜರಾತ್ ಮಾಡೆಲ್‘ ಅಭಿವೃದ್ದಿ ಮಾದರಿಯನ್ನು ಹುಟ್ಟುಹಾಕಿರುವುದನ್ನು ಕಂಡು ನಾನು ಅವರ(ಮೋದಿ) ಬಗ್ಗೆ ಅಧ್ಯಯನ ಮಾಡಬೇಕೆಂದುಕೊಂಡೆ. 2014ರಲ್ಲಿ ಪ್ರಧಾನಿಯಾದ ಅವರು ದೇಶದ ರಾಜಕೀಯ ಭವಿಷ್ಯವನ್ನು ಬೇರೆಡೆ ತೆಗೆದುಕೊಂಡು ಹೋದರು. ದೇಶದ ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡರು. ಅದಕ್ಕಾಗಿಯೇ ನಾನು ಅವರ ಕುರಿತು ಅಧ್ಯಯನ ಮಾಡಿದೆ’ ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ನಜ್ಮಾ ಅವರ ಶೈಕ್ಷಣಿಕ ಅಭ್ಯಾಸಕ್ಕೆ ‘ವಿಶ್ವ ಭಾರತ ಸಂಸ್ಥಾನ’ದ ಸ್ಥಾಪಕ ರಾಜೀವ್ ಚಂದ್ರಶೇಖರ್ ಅವರು ಸಹಾಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.