ಮುಂಬೈ:ತಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ತನುಶ್ರೀ ದತ್ತಾ ಅವರಿಗೆ ಹಿರಿಯ ನಟ ನಾನಾ ಪಾಟೇಕರ್ ಅವರು ‘ನೋಟಿಸ್’ ನೀಡಿದ್ದಾರೆ.

ತನುಶ್ರೀ ಅವರಿಗೆ ನೋಟಿಸ್ ನೀಡಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪಾಟೇಕರ್ ಅವರ ವಕೀಲ ರಾಜೇಂದ್ರ ಶಿರೋಡ್ಕರ್ ಅವರು ಸೋಮವಾರ ತಿಳಿಸಿದ್ದಾರೆ.

‘2008ರಲ್ಲಿ ಹಾರ್ನ್ ಓಕೆ ಪ್ಲೀಸ್’ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್ ತಮ್ಮ ಜತೆಗೆ ಅಹಿತಕರವಾಗಿ ನಡೆದುಕೊಂಡಿದ್ದರು’ ಎಂದು ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ತನುಶ್ರೀ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.

‘ಪಾಟೇಕರ್ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದುದು ಚಿತ್ರರಂಗದಲ್ಲಿ ಎಲ್ಲರಿಗೂ ತಿಳಿದಿದ್ದರೂ ಯಾರೂ ಬಾಯಿ ಬಿಟ್ಟಿರಲಿಲ್ಲ ಎಂದು ದೂರಿರುವ ತನುಶ್ರೀ, ‘ಪಾಟೇಕರ್ ಯಾವುದೇ ಚಿತ್ರೀಕರಣದ ಸೆಟ್ನಲ್ಲಿಯೂ ಹೆಣ್ಣು ಮಕ್ಕಳೊಂದಿಗೆ ಗೌರವದಿಂದ ನಡೆದು ಕೊಳ್ಳುತ್ತಿರಲಿಲ್ಲ’ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ತನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಏಕೆ ಈ ರೀತಿ ಮಾಡತನಾಡಿದ್ದಾರೆ ಎಂದು ಗೊತ್ತಿಲ್ಲ. ಅವರು ತಕ್ಷಣ ಕ್ಷಮೆ ಕೋರಬೇಕು ಎಂದು ಕೇಳಲಾಗಿದೆ ಎಂದು ಶಿರೋಡ್ಕರ್ ತಿಳಿಸಿದ್ದಾರೆ. ಈ ವಿಷಯವಾಗಿ ನಾನಾ ಪಾಟೇಕರ್ ಅವರು ಮುಂಬೈಗೆ ಬರಲಿದ್ದು, ಇಂದು ಅಥವಾ ನಾಳೆ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.

ಏನಿದು ಆರೋಪ
ನಾನಾ ಪಾಟೇಕರ್ ತಮ್ಮೊಂದಿಗೆ ಅಹಿತಕರವಾಗಿ ನಡೆದುಕೊಂಡಿದ್ದರು ಎಂದು ಒಂಬತ್ತು ವರ್ಷಗಳ ಬಳಿಕ ತನುಶ್ರೀ ಆಪಾದಿಸಿದ್ದರು. ‘ಆಶಿಕ್ ಬನಾಯ ಆಪ್ನೆ’ ಚಿತ್ರದ ಮೂಲಕ ಸುದ್ದಿಯಾಗಿದ್ದ ಈ ಮಾಜಿ ಭಾರತ ಸುಂದರಿ ಕೆಲ ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದರು. ಕಳೆದ ಜುಲೈನಲ್ಲಷ್ಟೇ ಸ್ವದೇಶಕ್ಕೆ ವಾಪಸಾಗಿರುವ, 34ರ ಹರೆಯದ ತನುಶ್ರೀ, ಪಾಟೇಕರ್ ವರ್ತನೆಯ ಬಗ್ಗೆ ಬಾಯಿ ಬಿಟ್ಟಿದ್ದರು.

ಪಾಟೇಕರ್ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದುದು ಚಿತ್ರರಂಗದಲ್ಲಿ ಎಲ್ಲರಿಗೂ ತಿಳಿದಿದ್ದರೂ ಯಾರೂ ಬಾಯಿ ಬಿಟ್ಟಿರಲಿಲ್ಲ ಎಂದು ದೂರಿರುವ ತನುಶ್ರೀ, ‘ಪಾಟೇಕರ್ ಯಾವುದೇ ಚಿತ್ರೀಕರಣದ ಸೆಟ್ನಲ್ಲಿಯೂ ಹೆಣ್ಣು ಮಕ್ಕಳೊಂದಿಗೆ ಗೌರವದಿಂದ ನಡೆದು ಕೊಳ್ಳುತ್ತಿರಲಿಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಎಷ್ಟೋ ಕಲಾವಿದೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೂ ಪಾಟೇಕರ್ ವಿರುದ್ಧ ಯಾವುದೇ ಹೆಣ್ಣು ಮಗಳು ಧ್ವನಿ ಎತ್ತಿಲ್ಲ, ಮಾಧ್ಯಮಗಳೂ ಬರೆದಿಲ್ಲ. ನಾನು ಗ್ಲಾಮರಸ್ ಪಾತ್ರ ಮಾಡುವ ಕಾರಣ ಸೆಟ್ನಲ್ಲಿಯೂ ಗ್ಲಾಮರಸ್ ಆಗಿಯೇ ನಡೆದುಕೊಳ್ಳಬೇಕು ಎಂದು ಬಯಸುವುದರಲ್ಲಿ ತಪ್ಪೇನು ಎಂದು ನನ್ನ ವಿರುದ್ಧವೇ ಚಿತ್ರರಂಗದಲ್ಲಿ ಎಲ್ಲರೂ ಮಾತನಾಡಿದ್ದರು’ ಎಂದು ತನುಶ್ರೀ ದೂರಿದ್ದರು.

ತನುಶ್ರೀ ದತ್ತಾ ತಮ್ಮ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘಕ್ಕೆ ದೂರು ನೀಡಿದ್ದರು ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ತನುಶ್ರೀ ಸ್ಥಾನಕ್ಕೆ ರಾಖಿ ಸಾವಂತ್ ಅವರನ್ನು ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.