ನವದೆಹಲಿ: ತಮಿಳುನಾಡಿನ ವಸತಿಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಬಾಲಕಿಯ ಪ್ರಕರಣದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (ಎನ್ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಮುಂದಿನ ವಾರ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

‘ತಮಿಳುನಾಡಿನ ಕಲ್ಲಕುರಿಚಿಗೆ ಜುಲೈ 27ರಂದು ಭೇಟಿ ನೀಡುತ್ತಿದ್ದೇನೆ’ ಎಂದು ಪ್ರಿಯಾಂಕ್ ಟ್ವೀಟ್ ಮಾಡಿದ್ದಾರೆ.

ಬಾಲಕಿ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ‘ಆಯೋಗವು ಈ ವಿಷಯವನ್ನು ಪರಿಶೀಲಿಸುತ್ತಿದೆ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದು ಪ್ರಿಯಾಂಕ್ ಹೇಳಿದ್ದರು.

ಕಲ್ಲಕುರಿಚಿ: ವಿದ್ಯಾರ್ಥಿನಿಯ ಮೃತದೇಹ ಪಡೆಯಲು ಒಪ್ಪದ ಪೋಷಕರು, ಪೊಲೀಸರಿಂದ ನೋಟಿಸ್

ಚಿನ್ನಸೇಲಂನ ಖಾಸಗಿ ವಸತಿಶಾಲೆಯೊಂದಲ್ಲಿ 12ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕಿಯು ಜುಲೈ 13ರಂದು ಹಾಸ್ಟೆಲ್ನ ಕಾಂಪೌಂಡ್ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸಾವಿಗೂ ಮುನ್ನ ಬಾಲಕಿಗೆ ಗಾಯಗಳಾಗಿದ್ದವು ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದುಬಂದಿತ್ತು.

ಬಾಲಕಿಯ ಸಾವಿನ ಬಳಿಕ ಪ್ರತಿಭಟನಕಾರರು ಜುಲೈ 17ರಂದು ಖಾಸಗಿ ವಸತಿ ಶಾಲೆಗೆ ನುಗ್ಗಿ ಆಸ್ತಿಯನ್ನು ಧ್ವಂಸಗೊಳಿಸಿ, ಶಾಲಾ ಬಸ್ಗಳಿಗೆ ಬೆಂಕಿ ಹಚ್ಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.