ನವದೆಹಲಿ: ವಿದ್ಯುತ್ ಉಪಕರಣ, ವಾಹನ, ಕಂಪ್ಯೂಟರ್‌ಗಳ ದುರಸ್ತಿ ಮಾಡಿಸುವುದು ಲಾಕ್‌ಡೌನ್‌ನ ಎರಡನೇ ಅವಧಿಯಲ್ಲಿ ಸುಗಮವಾಗಲಿದೆ. ಸ್ವ ಉದ್ಯೋಗ ಮಾಡುತ್ತಿರುವ ಟೆಕ್ನಿಷಿಯನ್‌ಗಳು ಏಪ್ರಿಲ್ 20ರಿಂದ ತಮ್ಮ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸರ್ಕಾರ ಹೇಳಿದೆ.

ಎರಡನೇ ಅವಧಿಯ ಲಾಕ್‌ಡೌನ್‌ಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗದರ್ಶಿಯಲ್ಲಿ ಸ್ವ ಉದ್ಯೋಗ ನಡೆಸುತ್ತಿರುವ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಎಲೆಕ್ಟ್ರಿಷಿಯನ್, ಪ್ಲಂಬರ್, ಮೋಟಾರು ವಾಹನ ದುರಸ್ತಿಪಡಿಸುವವರು, ಬಡಗಿಗಳು, ಐಟಿ ಮೆಕ್ಯಾನಿಕ್‌ಗಳು ಸೇರಿದಂತೆ ಹಲವರಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

21 ದಿನಗಳ ಲಾಕ್‌ಡೌನ್ ವೇಳೆ ಜನರು ಗೃಹೋಪಕರಣ ಮತ್ತು ಇತರ ಅಗತ್ಯ ಉಪಕರಣಗಳನ್ನುದುರಸ್ತಿ ಮಾಡಿಸಲಾಗದೇ ಸಮಸ್ಯೆ ಅನುಭವಿಸಿದ್ದ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ. ಬೇಸಿಗೆಯಾಗಿರುವುದರಿಂದ ಏರ್–ಕಂಡೀಷನರ್‌ಗಳ ಸರ್ವೀಸ್ ಮಾಡಿಸಿಕೊಳ್ಳಬೇಕೆಂಬ ಬೇಡಿಕೆಗಳಿವೆ. ಇಂತಹ ಸೇವೆಗಳಿಗೆ ಏಪ್ರಿಲ್ 20ರಿಂದ ಅನುಮತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿರ್ಧಾರದಿಂದಾಗಿ ಕೆಲವು ಸ್ವ ಉದ್ಯೋಗಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದರೆ ಟ್ಯಾಕ್ಸಿ, ಕ್ಯಾಬ್, ಆಟೊ ರಿಕ್ಷಾ ಮತ್ತಿತರ ಸೇವೆ ಒದಗಿಸುವವರ ಸಂಕಷ್ಟ ಮುಂದುವರಿಯಲಿದೆ. ಲಾಕ್‌ಡೌನ್ ಸಂಬಂಧಿತ ಹೊಸ ಮಾರ್ಗದರ್ಶಿಯಲ್ಲಿಯೂ ಸಾರಿಗೆ ವ್ಯವಸ್ಥೆ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ.

ಸೈಕಲ್ ರಿಕ್ಷಾಗಳ ಕಾರ್ಯಾಚರಣೆಗೂ ಅನುಮತಿ ನೀಡಲಾಗಿಲ್ಲ. ಜನ ಸಂಚಾರ ಇರದಂತೆ ನೋಡಿಕೊಳ್ಳುವ ಸಲುವಾಗಿ ಸಾರ್ವಜನಿಕ ಸಾರಿಗೆಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.