ಮಹೇಸಾಣಾ (ಪಿಟಿಐ): ಗುಜರಾತ್ನ ಮಹೇಸಣಾ ಜಿಲ್ಲೆಯ ಕಡಿ ನಗರದಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಕುಸಿದು ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅವಘಡದ ಸಂದರ್ಭದಲ್ಲಿ ಕಾರ್ಮಿಕರು ನೆಲದಡಿ ಟ್ಯಾಂಕ್ ನಿರ್ಮಾಣಕ್ಕಾಗಿ 16 ಅಡಿ ಉದ್ದದ ಗುಂಡಿ ತೋಡುತ್ತಿದ್ದರು ಎಂದು ಕಡಿ ಠಾಣೆ ಇನ್ಸ್ಪೆಕ್ಟರ್ ಪ್ರಹ್ಲಾದಸಿನ್ಹಾ ವಿಘ್ನೇಲಾ ತಿಳಿಸಿದ್ದಾರೆ.

‘ಸತತ ಎರಡು ತಾಸು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಮಣ್ಣಿನ ರಾಶಿಯಿಂದ ಇಬ್ಬರು ಮಹಿಳೆಯರು ಸೇರಿ ಒಂಬತ್ತು ಮಂದಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತರ ಪೈಕಿ ಬಹುತೇಕರು ದಾಹೋದ್ನವರು, ಮೂವರು ರಾಜಸ್ಥಾನದವರು. ಎಲ್ಲರೂ 20–30 ವರ್ಷ ವಯೋಮಾನದವರು’ ಎಂದು ತಿಳಿಸಿದರು.

ಕಾರ್ಮಿಕರು ಸ್ಟೀಲಿನೋಕ್ಸ್ ಸ್ಟೈನ್ಲೆಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಕಾಮಗಾರಿ ಮಾಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ದುರಂತ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಕಂಬನಿ ಮಿಡಿದಿದ್ದಾರೆ. ‘ಗೋಡೆ ಕುಸಿದು ದುರಂತ ಸಂಭವಿಸಿರುವುದು ತಿಳಿದು ತೀವ್ರ ನೋವುಂಟಾಗಿದೆ. ಅವರ ಕುಟುಂಬಗಳಿಗೆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.