ಚೆನ್ನೈ: ಶ್ರೀಲಂಕಾ ನೌಕಾಪಡೆ ಮತ್ತೆ ಬಂಬತ್ತು ಮೀನುಗಾರರನ್ನು ಬಂಧಿಸಿದ್ದು, ತ್ವರಿತವಾಗಿ ಅವರನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಬುಧವಾರ ಪತ್ರ ಬರೆದಿದ್ದಾರೆ.

ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, 22 ಜುಲೈ 2024ರಂದು ರಾಮೇಶ್ವರಂ ಮೂಲದ ಒಂಬತ್ತು ಮೀನುಗಾರರನ್ನು ಮತ್ತು ಅವರ ಎರಡು ಮೀನುಗಾರಿಕಾ ದೋಣಿಗಳನ್ನು ಶ್ರೀಲಂಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
.‘ಕುರ್ಚಿ ಬಚಾವೊ ಬಜೆಟ್’ ಎಂದು ಬಿಂಬಿಸಿ;ರಾಜ್ಯಗಳನ್ನು ಟೀಕಿಸಬೇಡಿ: ರಾಹುಲ್ ಗಾಂಧಿ.ಬಜೆಟ್ನಲ್ಲಿ ತಮಿಳುನಾಡು ಕಡೆಗಣನೆ: ಸ್ಟಾಲಿನ್ ಟೀಕೆ.
ಮೀನುಗಾರರನ್ನು ಬಂಧಿಸುವುದು, ಅವರ ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಮೀನುಗಾರರು ಆತಂಕದಲ್ಲಿ ಇದ್ದಾರೆ. ಈ ಪರಿಸ್ಥಿತಿಯನ್ನು ಸರಾಗಗೊಳಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಶ್ರೀಲಂಕಾದಿಂದ ಬಿಡುಗಡೆಗೊಂಡಿರುವ 87 ಮೀನುಗಾರರು ಮತ್ತು 175 ದೋಣಿಗಳನ್ನು ಸುರಕ್ಷಿತವಾಗಿ ತಮಿಳುನಾಡಿಗೆ ಕರೆತರುವಂತೆಯೂ ಎಂ.ಕೆ ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.
.ಸಾವಿರಾರು ಎಕರೆ ‘ಬೋಗಸ್ ಗ್ರ್ಯಾಂಟ್’: ಕೃಷ್ಣ ಬೈರೇಗೌಡ.ಟ್ರಂಪ್ಗಿಂತ ಹ್ಯಾರಿಸ್ಗೆ ಮುನ್ನಡೆ: ಸಮೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.