ನವದೆಹಲಿ: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ,ನೆಹರು ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಎನ್ಎಂಎಂಎಲ್) ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿದಿರುವ ಎಂ.ಜೆ. ಅಕ್ಬರ್, ಈ ಸೊಸೈಟಿಗೆ ಹೊಸದಾಗಿ ನಾಲ್ವರು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪತ್ರಕರ್ತ ಅರ್ನಾಬ್ ಗೋಸ್ವಾಮಿ,ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್, ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಹಾಗೂ ಐಜಿಎನ್ಸಿಎ ಮುಖ್ಯಸ್ಥ ರಾಮ್ ಬಹದೂರ್ ರಾಯ್ ಅವರನ್ನು ನೇಮಕ ಮಾಡಿ ಕೇಂದ್ರಸರ್ಕಾರ ನೇಮಿಸಿದೆ. ಈ ಸೊಸೈಟಿ ಇರುವ ತೀನ್ ಮೂರ್ತಿ ಎಸ್ಟೇಟ್ ಪ್ರದೇಶದಲ್ಲಿ ಎಲ್ಲ ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸದಸ್ಯರಾದ ನಿತಿನ್ ದೇಸಾಯಿ, ಪ್ರೊ. ಉದಯನ್ ಮಿಶ್ರಾ, ಬಿ.ಪಿ. ಸಿಂಗ್ ಹಾಗೂ ಪ್ರತಾಪ್ ಭಾನುಮೆಹ್ತಾ ಅವರ ಬದಲಿಗೆ ಈ ನಾಲ್ವರನ್ನು ನೇಮಕ ಮಾಡಲಾಗಿದೆ.

‘ಮೊದಲಿದ್ದ ಸದಸ್ಯರ ಅಧಿಕಾರಾವಧಿ ಇನ್ನೂ ಮುಗಿದಿಲ್ಲ. ಆದರೆ, ಅವರನ್ನು ಬದಲಾಯಿಸಲಾಗಿದೆ’ ಎಂದು ಎನ್ಎಂಎಂಎಲ್ ನಿರ್ದೇಶಕ ಶಕ್ತಿ ಸಿನ್ಹಾ ತಿಳಿಸಿದ್ದಾರೆ. ‘ಎನ್ಎಂಎಂಎಲ್ ಅನ್ನು ಸಂಶೋಧನೆಯ ಕೇಂದ್ರವನ್ನಾಗಿ ಮಾಡುವ ಮಹತ್ತರ ಯೋಜನೆಯ ಭಾಗವಾಗಿ ಈ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. ಅದರಲ್ಲಿಯೂ ರಾಮ್ ಬಹದ್ದೂರ್ ರಾವ್ ಅವರು 50 ವರ್ಷಗಳಿಂದ ಭಾರತದ ರಾಜಕೀಯ ಚಿತ್ರಣವನ್ನು ಕಂಡಿದ್ದಾರೆ. ಅನೇಕ ಪ್ರಧಾನಿಗಳನ್ನು ಅವರು ವೈಯಕ್ತಿಕವಾಗಿ ಬಲ್ಲರು’ ಎಂದು ಸಿನ್ಹಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.