ಬೆರ್ಹಾಂಪುರ (ಒಡಿಶಾ): ಗಂಜಾಂ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದ 20 ಜನರ ಕುಟುಂಬಗಳಿಗೆ ಪಡಿತರ ಆಹಾರ ವಿತರಣೆಯನ್ನು ಸ್ಥಳೀಯ ಪಂಚಾಯ್ತಿ ಸ್ಥಗಿತಗೊಳಿಸಿದೆ.

ಅಕ್ಟೋಬರ್ 20ರಂದು ನಡೆದ ಪಂಚಾಯ್ತಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದ್ದು, 11 ದಿನಗಳಿಂದ ಈ 20 ಕುಟುಂಬಗಳಿಗೆ ಪಡಿತರ ಆಹಾರವನ್ನು ಪೂರೈಕೆ ನಿಲ್ಲಿಸಲಾಗಿದೆ ಎಂದು ಗೌತಮಿ ಪಂಚಾಯ್ತಿಯ ಸರ್ಪಂಚ್ ಸುಶಾಂತ್ ಸ್ವೈನ್ ತಿಳಿಸಿದರು.

ಯಾರಾದರೂ ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಹೋಗುತ್ತಿರುವುದು ಪತ್ತೆಯಾದರೆ, ಅವರಿಗೆ ಒಂದು ತಿಂಗಳು ಪಡಿತರ ವಿತರಿಸದಂತೆ ಪಂಚಾಯ್ತಿಯು ಸಂಬಂಧಿಸಿದ ಪಡಿತರ ವಿತರಕರಿಗೆ ಸೂಚಿಸುತ್ತದೆ. ಈ ಮೂಲಕವಾದರೂ ಜನರು ಶೌಚಾಲಯ ಬಳಸುವಂತಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಗೌತಮಿ ಪಂಚಾಯ್ತಿಯಲ್ಲಿ 2000 ಮನೆಗಳಿದ್ದು, 180 ಮನೆಗಳು ಶೌಚಾಲಯ ಹೊಂದಿಲ್ಲ. ಈ ಮನೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ರಾಜ್ಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಗೆ ಪಡಿತರ ಸೌಲಭ್ಯವನ್ನು ಮೊಟಕುಗೊಳಿಸಲು ಬರುವುದಿಲ್ಲ. ಈ ಕುರಿತು ತಾಲ್ಲೂಕು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆ. ಪಡಿತರ ಸೌಲಭ್ಯ ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳಲಾಗುವುದು‘ ಎಂದು ಗಂಜಾಂ ಜಿಲ್ಲಾಧಿಕಾರಿ ವಿಜಯ್ ಅಮೃತಾ ಕುಂಜೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.