ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳ (ಎನ್ಇಟಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಭಾನುವಾರ ಘೋಷಿಸಿದೆ. ಆ ಮೂಲಕ ಈ ಸಲ ವಿಳಂಬವಾಗಿರುವ ಪದವಿ ಕೋರ್ಸ್ಗಳ ಪ್ರವೇಶಾತಿಗೆ ಅನುವು ಮಾಡಿಕೊಟ್ಟಿದೆ.

ಸಿಯುಇಟಿ–ಯುಜಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ‘ಕೀ ಉತ್ತರ’ಗಳನ್ನು ಜುಲೈ 7ರಂದು ಎನ್ಟಿಎ ಪ್ರಕಟಿಸಿತ್ತು. ಕೀ ಉತ್ತರಗಳಿಗೆ ಸಲ್ಲಿಸಿದ್ದ ಆಕ್ಷೇಪವು ನೈಜ ಕಂಡುಬಂದ ಬಳಿಕ 1 ಸಾವಿರಕ್ಕೂ ಅಭ್ಯರ್ಥಿಗಳಿಗೆ ಜುಲೈ 19ರಂದು ಮರುಪರೀಕ್ಷೆ ನಡೆಸಿತ್ತು.

ಈ ಹಿಂದೆ ಜೂನ್ 30ರಂದು ಸಿಯುಇಟಿ– ಯುಜಿ ಫಲಿತಾಂಶ ಪ್ರಕಟಿಸಲು ಎನ್ಟಿಎ ನಿರ್ಧರಿಸಿತ್ತು. ನೀಟ್–ಯುಜಿ, ಯುಜಿಸಿ– ನೆಟ್ ಪರೀಕ್ಷೆಯಲ್ಲಿ ಅಕ್ರಮಗಳು ಕಂಡುಬಂದ ಬಳಿಕ ಸಿಯುಇಟಿ– ಯುಜಿ ಪರೀಕ್ಷಾ ಫಲಿತಾಂಶವನ್ನು ವಿಳಂಬಗೊಳಿಸಿತು.

63 ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಪರೀಕ್ಷೆಗೆ ದೇಶದಾದ್ಯಂತ 13.4 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವವರು ದೇಶದ ಒಟ್ಟು 261 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.