ಬೆಹ್ರಾಂಪುರ (ಒಡಿಶಾ): ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಕನಿಷ್ಠ ಇಬ್ಬರು ಮಹಿಳೆಯರು ಮೃತಪಟ್ಟು, ಆರು ಮಂದಿ ಅಸ್ವಸ್ಥಗೊಂಡ ಘಟನೆ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ದರಿಂಗ್ಬಾಡಿ ಬ್ಲಾಕ್ನ ಮಂಡಿಪಂಕ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
.ಆಲಿವ್ ರಿಡ್ಲಿ ಆಮೆಗಳ ಸಂರಕ್ಷಣೆ: ಒಡಿಶಾ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ.
ಗಂಜಿ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಗಜಪತಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಗಡಾಪುರ್ನ ಸರಪಂಚ್ ಕುಮಾರ್ ಮಲಿಕ್ ತಿಳಿಸಿದ್ದಾರೆ.

ಅಸ್ವಸ್ಥ ಮತ್ತೊಬ್ಬ ಮಹಿಳೆಯನ್ನು ಶುಕ್ರವಾರ ಬೆಳಿಗ್ಗೆ ಬೆಹ್ರಾಂಪುರದ ಎಂ.ಕೆ.ಸಿ.ಜಿ. ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪಂಚಾಯತ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
.ಒಡಿಶಾ: ಗರ್ಭಿಣಿಗೆ ರಜೆ ನೀಡದ ಸಿಡಿಪಿಒ ಅಮಾನತು.
ಗಂಜಿ ಕುಡಿದವರಲ್ಲಿ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಅಧಿಕಾರಿ ಡಾ. ಸುಬ್ರಾತ್ ದಾಸ್ ಹೇಳಿದ್ದಾರೆ.

‘ಆಸ್ಪತ್ರೆಗೆ ದಾಖಲಿಸಲಾದವರ ಸ್ಥಿತಿ ಗಂಭೀರವಾಗಿದೆ. ವಿಷಪೂರಿತ ಆಹಾರದಿಂದಾಗಿ ಹೀಗಾಗಿದೆ. ಘಟನೆಗೆ ನಿಖರ ಕಾರಣ ತನಿಖೆಯ ಬಳಿಕ ಗೊತ್ತಾಗಬೇಕಷ್ಟೇ’ ಎಂದು ಸುಬ್ರಾತ್ ತಿಳಿಸಿದ್ದಾರೆ.
.ಒಡಿಶಾ | ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರು ಮಹಿಳೆಯರು ಸೇರಿ 5 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.