ನವದೆಹಲಿ: ‘ದೇಶದ ಬಹುತೇಕ ವೈಜ್ಞಾನಿಕ ಸಂಸ್ಥೆಗಳನ್ನು ಸ್ವಾತಂತ್ರ್ಯಪೂರ್ವದಲ್ಲಿನ ಜನರು ಆರಂಭಿಸಿದ್ದಾರೆ. ಇವುಗಳ ಸ್ಥಾಪನೆಯಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಯಾವುದೇ ಪಾತ್ರವಿಲ್ಲ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಪಾದಿಸಿದ್ದಾರೆ.

‘ಚಂದ್ರಯಾನ–3‘ ಮಿಷನ್ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ಅವರು, ವಿರೋಧಪಕ್ಷಗಳು ಈಗ ‘ಇಸ್ರೊ ಭಜನೆ’ಗೆ ಬದಲಾಗಿ ‘ನೆಹರೂ ಭಜನೆ’ ಮಾಡುವುದರಲ್ಲಿ ನಿರತವಾಗಿವೆ ಎಂದು ಅವರು ಟೀಕಿಸಿದ್ದಾರೆ.

‘1942ರಲ್ಲಿ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿಯನ್ನು ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮತ್ತು ಶಾಂತಿಸ್ವರೂಪ ಭಟ್ನಾಗರ್ ಅವರು ಸ್ಥಾಪಿಸಿದ್ದರು’ ಎಂದು ಹೇಳಿದರು.

‘ಇದರಲ್ಲಿ ನೆಹರೂ ಅವರ ಪಾತ್ರ ಏನಿತ್ತು? ಒಂದು ಸಭೆಯಲ್ಲಿ ಪಂಡಿತ್ ನೆಹರೂ ಅವರು, ‘ಮಂಡಳಿಯ ಕಾರ್ಯಚಟುವಟಿಕೆಗೆ ಹೆಚ್ಚಿನ ಸಮಯ ನೀಡಲು ನನಗೆ ಕಷ್ಟಸಾಧ್ಯವಾಗಲಿದೆ. ಸದ್ಯಕ್ಕೆ, ಮಂಡಳಿಯ ನಿತ್ಯದ ಚಟುವಟಿಕೆಗಳ ಮೇಲುಸ್ತುವಾರಿಯನ್ನು ಶ್ಯಾಮಪ್ರಸಾದ್ ಮುಖರ್ಜಿ ಅವರು ನೋಡಿಕೊಳ್ಳುವರು ಎಂದಿದ್ದರು’ ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದರು.

‘ಜನಸಂಘದ ಸ್ಥಾಪಕರೂ ಆದ ಶ್ಯಾಮಪ್ರಸಾದ್ ಮುಖರ್ಜಿ ನೇತೃತ್ವದಲ್ಲಿಯೇ ದೇಶದ ಮೊದಲ ವೈಜ್ಞಾನಿಕ ಸಂಸ್ಥೆಗೆ ಹೆಚ್ಚಿನ ಬಲ ಸಿಕ್ಕಿತ್ತು. ಈಗ ವೈಜ್ಞಾನಿಕ ಕ್ಷೇತ್ರದ ಸಾಧನೆಗೆ ನೆಹರೂ ಕೊಡುಗೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವ ಬೇರೆಯೇ ಇದೆ’ ಎಂದರು.

‘ಚಂದ್ರಯಾನ–1 ಯೋಜನೆಗೆ 2003ರಲ್ಲಿ ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅನುಮೋದನೆ ನೀಡಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಇದನ್ನೂ ನೆಹರೂ ದೃಷ್ಟಿಕೋನದಿಂದ ನೋಡಿತು. ಇದರಲ್ಲಿ ಅವರ ಯಾವುದೇ ಪಾತ್ರ ಇರಲಿಲ್ಲ. ಚಂದ್ರಯಾನ–3 ಯಶಸ್ವಿಯಾದಾಗ ನಿರ್ದಿಷ್ಟ ಸ್ಥಳಕ್ಕೆ ತಿರಂಗಾ ಪಾಯಿಂಟ್ ಎಂದು ಮೋದಿ ಹೆಸರಿಸಿದರು. ನಿರ್ದಿಷ್ಟವಾಗಿ ಯಾರದೇ ಗುಣಗಾನ ಮಾಡಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.