ನವದೆಹಲಿ: ದೇಶದ ಕೆಳ ಹಂತದ ನ್ಯಾಯಾಲಯಗಳಲ್ಲಿ ಕಳೆದ ಒಂದು ದಶಕದಿಂದ ವಿಲೇವಾರಿಯಾಗದೆ ಉಳಿದಿರುವ ಪ್ರಕರಣಗಳ ಸಂಖ್ಯೆ ಸುಮಾರು 22 ಲಕ್ಷ. 10 ವರ್ಷದಿಂದ ಬಾಕಿ ಇರುವ ಪ್ರಕರಣಗಳ ಅಂಕಿ ಅಂಶವನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಕೋಶ (ಎನ್ಜೆಡಿಜಿ) ಬಿಡುಗಡೆ ಮಾಡಿದೆ.

ಇ–ಕೋರ್ಟ್ ಯೋಜನೆಯಡಿ ಬರುವ ಎನ್ಜೆಡಿಜಿ, ಬಾಕಿ ಪ್ರಕರಣಗಳನ್ನು ಗುರುತಿಸುವ ನಿರ್ವಹಿಸುವ ಹಾಗೂ ಅವುಗಳ ಸಂಖ್ಯೆ ಕಡಿತಗೊಳಿಸುವ ಕೆಲಸ ಮಾಡುತ್ತದೆ.ದೇಶದ ಎಲ್ಲ ಜಿಲ್ಲಾ ಕೋರ್ಟ್ಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಮಾಹಿತಿ ನೀಡಲು ಸುಪ್ರೀಂಕೋರ್ಟ್ನ ಇ–ಸಮಿತಿಯು ಎನ್ಜೆಡಿಜಿಯನ್ನು ರಚಿಸಿತ್ತು.

ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳೆಂದು ವಿಂಗಡಿಸಿ, ಈ ಪೈಕಿ ಅತಿ ಹೆಚ್ಚು ವರ್ಷಗಳಿಂದ ವಿಚಾರಣೆಯಾಗದೇ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ಇದು ನೀಡಿದೆ. ಕೇಸ್ಗಳ ತ್ವರಿತ ವಿಲೇವಾರಿ ಮಾಡುವಂತೆ 24 ಹೈಕೋರ್ಟ್ಗಳ ಮುಖ್ಯನ್ಯಾಯಾಧೀಶರಿಗೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ.

ಅಂಕಿ–ಅಂಶಗಳು

2.50 ಕೋಟಿ

ಕೆಳ ಹಂತದ ಕೋರ್ಟ್ಗಳಲ್ಲಿ ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆ

5.97 ಲಕ್ಷ

10 ವರ್ಷದಿಂದ ಬಾಕಿ ಇರುವ ಸಿವಿಲ್ ಪ್ರಕರಣಗಳು

16.92

10 ವರ್ಷದಿಂದ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.