ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ ಅನ್ನು ಆಗಸ್ಟ್ 8 ರಂದು ವಿಸರ್ಜಿಸಲು ಪ್ರಮುಖ ಆಡಳಿತಾರೂಢ ಪಕ್ಷಗಳು ಸಮ್ಮತಿಸಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಸಾರ್ವತ್ರಿಕ ಚುನಾವಣೆಗೆ ಹೆಚ್ಚುವರಿ ಕಾಲಾವಕಾಶಕ್ಕಾಗಿ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವುದಕ್ಕೂಕೆಲ ದಿನಗಳ ಮುನ್ನ ಸಂಸತ್ ವಿಸರ್ಜಿಸಲು ಪಾಕಿಸ್ತಾನ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್–ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಕ್ಷಗಳು(ಪಿಪಿಪಿ) ಒಪ್ಪಿಗೆ ಸೂಚಿಸಿವೆ ಎಂದು ‘ಜಿಯೊ ನ್ಯೂಸ್’ ವರದಿ ಮಾಡಿದೆ.

ಸಂಸತ್ನ ಐದು ವರ್ಷಗಳ ಅವಧಿಯು ಆಗಸ್ಟ್ 12ರಂದು ಮಧ್ಯರಾತ್ರಿಗೆ ಕೊನೆಗೊಳ್ಳಲಿದೆ.

ಸಂವಿಧಾನದ ಪ್ರಕಾರ ಸರ್ಕಾರ ವಿಸರ್ಜನೆಯಾದ 60 ದಿವಸಗಳೊಳಗೆ ಸಾರ್ವತ್ರಿಕ ಚುನಾವಣೆ ಅಥವಾ ಪ್ರಾಂತೀಯ ವಿಧಾನಸಭೆಗೆ ಚುನಾವಣೆ ಹಮ್ಮಿಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.