ಇಸ್ಲಾಮಾಬಾದ್: ‘ಮರಣದಂಡನೆ ಶಿಕ್ಷೆಗೆಗುರಿಯಾಗಿರುವ ಭಾರತದ ನೌಕಾಪಡೆಯನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಜೊತೆ ಮೂರನೇ ಭೇಟಿಗೆ ಅವಕಾಶ ಕಲ್ಪಿಸಲು ಪಾಕಿಸ್ತಾನ ಬದ್ಧ’ ಎಂದು ಅಲ್ಲಿನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾರತದ ರಾಯಭಾರ ಕಚೇರಿ ಪ್ರತಿನಿಧಿಗಳಿಗೆ ಜಾಧವ್ ಜೊತೆಗೆ ಎರಡನೇ ಬಾರಿಗೆ ಚರ್ಚಿಸಲು ಗುರುವಾರ ಪಾಕಿಸ್ತಾನ ಅವಕಾಶ ಕಲ್ಪಿಸಿತ್ತು. ಬಳಿಕ ಭಾರತ ಸರ್ಕಾರ, ‘ಎರಡನೇ ಭೇಟಿ ಅರ್ಥಪೂರ್ಣವಾಗಿ ಇರಲಿಲ್ಲ. ವಿಶ‍್ವಾಸಾರ್ಹವಾಗಿಯೂ ಇರಲಿಲ್ಲ. ಜಾಧವ್ ಮೇಲ್ನೋಟಕ್ಕೆ ಒತ್ತಡದಲ್ಲಿದ್ದಂತೆ ಕಂಡರು’ ಎಂದು ಪ್ರತಿಕ್ರಿಯಿಸಿತ್ತು.

‘ರಾಯಭಾರ ಕಚೇರಿ ಅಧಿಕಾರಿಗಳಿಗೆ ಷರತ್ತುರಹಿತವಾಗಿ, ಮುಕ್ತವಾಗಿ ಭೇಟಿಯಾಗಲುಅವಕಾಶವನ್ನು ಕಲ್ಪಿಸಿರಲಿಲ್ಲ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಪ್ರತಿಕ್ರಿಯಿಸಿದ್ದರು.

ಆದರೆ, ‘ನವದೆಹಲಿ ಬಯಸಿದ್ದಂತೆಯೇ ಜಾಧವ್ ಅವರ ಭೇಟಿಗೆ ಭಾರತೀಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಮತ್ತೊಂದು ಭೇಟಿಗೆ ಅವಕಾಶ ಕಲ್ಪಿಸಲೂ ಬದ್ಧ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಖುರೇಷಿ ಪ್ರತಿಕ್ರಿಯಿಸಿದರು’ ಎಂದು ಎಕ್ಸಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

‘ಭೇಟಿ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೂ ಇದ್ದರು ಎಂದು ಭಾರತ ಆಕ್ಷೇಪಿಸಿತ್ತು. ನಾವು ಈ ಸಿಬ್ಬಂದಿಯನ್ನು ಹೊರಕಳುಹಿಸುತ್ತೇವೆ. ಭಾರತ ಮತ್ತೊಂದು ಭೇಟಿ ಬಯಸಿದರೆ ಆ ಅವಕಾಶ ಮುಕ್ತವಾಗಿದೆ. ಯಾವುದೇ ಸಮಯದಲ್ಲಿ ಭೇಟಿ ಅವಕಾಶ ಒದಗಿಸಲು ಸಿದ್ಧ ಎಂದು ತಿಳಿಸಿದ್ದಾರೆ’ ಎಂದೂ ವರದಿ ಉಲ್ಲೇಖಿಸಿದೆ.

ಆದರೆ, ಇಂಥದೊಂದು ಸಂದೇಶ ಭಾರತ ಸರ್ಕಾರಕ್ಕೆ ರವಾನೆಯಾಗಿದೆಯೇ, ಇಲ್ಲವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವರದಿ ಸ್ಪಷ್ಟಪಡಿಸಿದೆ. ಭಯೋತ್ಪಾದನೆಗೆ ಸಂಚು ನಡೆಸಿದ್ದ ಆರೋಪಕ್ಕೆ ಸಂಬಂಧಿಸಿ ಜಾಧವ್ ಅವರಿಗೆ ಪಾಕ್ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.