ಹಮೀರ್ಪುರ (ಹಿಮಾಚಲ ಪ್ರದೇಶ): ಇತ್ತೀಚೆಗೆ ಕಾಶ್ಮೀರದಲ್ಲಿ ಹುತಾತ್ಮರಾದ ಅಗ್ನಿವೀರ ಸೈನಿಕ ನಿಖಿಲ್ ಧಾಡ್ವಾಲ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅವರ ಪೋಷಕರು, ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ.

ಧಾಡ್ವಾಲ್ ಅವರನ್ನು ಕಾಶ್ಮೀರದ ಟಂಡಾದಲ್ಲಿ ನಿಯೋಜಿಸಿದ್ದ ಸಂದರ್ಭದಲ್ಲಿ ಗುರುವಾರ ಮೃತಪಟ್ಟಿದ್ದರು.

ತಂದೆ ದಲೇರ್ ಸಿಂಗ್, ‘ಗಾಯಗೊಂಡಿದ್ದ ನಿಖಿಲ್ ಬಳಿಕ ಮೃತಪಟ್ಟರು ಎಂದು ಫೋನ್ ಮೂಲಕ ತಿಳಿಸಿದರು. ಸಾವಿನ ಕಾರಣ ಪತ್ತೆ ಮಾಡಲು ತನಿಖೆ ನಡೆಸಿ’ ಎಂದು ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದ್ದಾರೆ.

ಧಾಡ್ವಾಲ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ತವರಿಗೆ ತಂದಿದ್ದು, ಅಂದೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮಸಂಸ್ಕಾರ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.