ಲಖನೌ: ‘ಸರ್ಕಾರಕ್ಕಿಂತ ಪಕ್ಷ ದೊಡ್ಡದು’ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. ಇದು ರಾಜ್ಯ ಬಿಜೆಪಿ ಘಟಕದಲ್ಲಿ ಇದೆ ಎನ್ನಲಾದ ಅಸಮಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
.ಅಯೋಧ್ಯೆ, ಪ್ರಯಾಗ್ರಾಜ್ನಲ್ಲಿ ಗಣ್ಯರಿಗೆ ಅತಿಥಿ ಗೃಹ: ಸಿಎಂ ಯೋಗಿ ಆದಿತ್ಯನಾಥ್.
‘ಪಕ್ಷವು ಸರ್ಕಾರಕ್ಕಿಂತ ದೊಡ್ಡದು. ಕಾರ್ಯಕರ್ತರ ನೋವೇ ನನ್ನ ನೋವು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾರ್ಯಕರ್ತರು ಪಕ್ಷದ ಹೆಮ್ಮೆ’ ಎಂದು ಉಪಮುಖ್ಯಮಂತ್ರಿಗಳ ಕಚೇರಿ ಎಕ್ಸ್ನಲ್ಲಿ ಹಂಚಿಕೊಂಡಿದೆ.

ಲಖನೌನಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದ್ದನ್ನು ಪೋಸ್ಟರ್ ಮೂಲಕ ಹಂಚಿಕೊಂಡಿದೆ. ಅಲ್ಲದೆ ಹಿಂಬದಿಯಲ್ಲಿ ಕಾರ್ಯಕಾರಣಿ ಸಭೆಯ ಚಿತ್ರವೂ ಇದೆ.
.ಕೇಜ್ರಿವಾಲ್ಗೆ ಮಾನಸಿಕ ಸ್ಥಿಮಿತ ತಪ್ಪಿದೆ: ಯೋಗಿ ಆದಿತ್ಯನಾಥ್.
‘ಪಕ್ಷವು ಸರ್ಕಾರಕ್ಕಿಂತ ದೊಡ್ಡದು. ಅದು ಯಾವತ್ತೂ ಹಾಗೇ ಇರಲಿದೆ. ಏಳನೇ ಕಾಳಿದಾಸ ಮಾರ್ಗದಲ್ಲಿರುವ ನನ್ನ ನಿವಾಸ ಕಾರ್ಯಕರ್ತರಿಗೆ ಎಂದಿಗೂ ತೆರೆದಿರಲಿದೆ. ನಾನು ಮೊದಲು ಕಾರ್ಯಕರ್ತ, ನಂತರ ಉಪಮುಖ್ಯಮಂತ್ರಿ’ ಎಂದು ಅವರು ಸಭೆಯಲ್ಲಿ ಹೇಳಿದ್ದರು. ಅಲ್ಲದೇ ಕಾರ್ಯಕರ್ತರನ್ನು ಗೌರವಿಸಿ ಎಂದು ಶಾಸಕರಿಗೆ, ಸಚಿವರಿಗೆ ಅವರು ಮನವಿ ಮಾಡಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮೌರ್ಯ ಅವರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಗಾಳಿಸುದ್ದಿಗಳ ನಡುವೆಯೇ, ಮೌರ್ಯಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿದ್ದರು. ಇದರ ಮರುದಿನವೇ ಮೌರ್ಯ ಅವರ ಕಚೇರಿ ಈ ರೀತಿ ಎಕ್ಸ್ನಲ್ಲಿ ಬರೆದುಕೊಂಡಿದೆ.
.ಭಾರತ ಶ್ರೀರಾಮ, ಭಗವಾನ್ ಕೃಷ್ಣನ ಭೂಮಿ: ಸಿಎಂ ಯೋಗಿ ಆದಿತ್ಯನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.