ನಾಗ್ಪುರ: ‘ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರಿಗರು ಬಿಜೆಪಿಯ ದ್ವೇಷದ ಭಾಷೆಯನ್ನು ಸೋಲಿಸಲಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಶುಕ್ರವಾರ ಇಲ್ಲಿ ತಿಳಿಸಿದರು.

ಮಹಾ ವಿಕಾಸ್ ಆಘಾಡಿಯ (ಎಂವಿಎ) ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಬಂದಿದ್ದ ಅವರು, ಇಲ್ಲಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದಿಂದ ₹2 ಲಕ್ಷ ಕೋಟಿ ಮೊತ್ತದ ಹೂಡಿಕೆಗಳನ್ನು ತಮ್ಮ ತವರು ಗುಜರಾತ್ಗೆ ವರ್ಗಾಯಿಸುವ ಮೂಲಕ ತಾರತಮ್ಯದ ಧೋರಣೆ ಅನುಸರಿಸಿದ್ದಾರೆ. ಇದು ಜನರ ಮನಸ್ಸಿನಲ್ಲಿ ದೊಡ್ಡ ವಿಷಯವಾಗಿದೆ’ ಎಂದರು.

ಬಿಜೆಪಿಯ ‘ಬಟೇಂಗೆ ತೋ ಕಾಟೇಂಗೆ’ ಘೋಷವಾಕ್ಯಕ್ಕೆ ತಿರುಗೇಟು ನೀಡಿದ ಸಂಜಯ್ ಸಿಂಗ್, ‘ವಿಭಜನೆಗೊಳ್ಳದಿರಿ, ನಾಶವಾಗಬೇಡಿ, ಬಿಜೆಪಿಯ ಪತನವನ್ನು ಖಚಿತಪಡಿಸಿಕೊಳ್ಳಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.