ಪುಣೆ: ‘ತಂತ್ರಜ್ಞಾನದ ಉನ್ನತೀಕರಣದಿಂದ ಬಡವರಿಗೆ ಶಕ್ತಿ ತುಂಬಿದರೆ ಮಾತ್ರ ದೇಶದ ಉನ್ನತ ಸಾಧನೆಗೆ ಅರ್ಥ ಬರುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

‘ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್’ ಅಡಿಯಲ್ಲಿ ನಿರ್ಮಿಸಿದ ಸ್ವದೇಶಿ ನಿರ್ಮಿತ ಮೂರು ‘ಪರಂ ರುದ್ರ ಸೂಪರ್‌ಕಂಪ್ಯೂಟರ್ಸ್’ಗೆ ವಿಡಿಯೊ ಲಿಂಕ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ತಂತ್ರಜ್ಞಾನದ ಅಭಿವೃದ್ಧಿಯ ಲಾಭವು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. 2015ರಲ್ಲಿ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ ಜಾರಿಗೆ ತಂದಿದ್ದೆವು. ಕ್ವಾಂಟಂ ಕಂಪ್ಯೂಟಿಂಗ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಐ.ಟಿ, ಉತ್ಪಾದನಾ ಕ್ಷೇತ್ರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಹಾಗೂ ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಉನ್ನತೀಕರಣಕ್ಕೆ ನೆರವಾಗಿದೆ’ ಎಂದು ಅವರು ತಿಳಿಸಿದರು.

‘ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ಸರ್ಕಾರವು ಗರಿಷ್ಠ ಆದ್ಯತೆ ನೀಡಿದ್ದೇವೆ. ‘ಮಿಷನ್ ಗಗನ್‌ಯಾನ್’ ಈಗಾಗಲೇ ಆರಂಭಗೊಂಡಿದ್ದು, 2035ರ ವೇಳೆಗೆ ನಾವು ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಿರಲಿದ್ದೇವೆ. ಮೊದಲ ಹಂತದ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ’ ಎಂದು ಮೋದಿ ಹೇಳಿದರು.

‘₹130 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೂರು ಸೂಪರ್ ಕಂಪ್ಯೂಟರ್‌ಗಳನ್ನು ಪುಣೆ, ದೆಹಲಿ ಹಾಗೂ ಕೋಲ್ಕತ್ತದಲ್ಲಿ ಸ್ಥಾಪಿಸಲಾಗುತ್ತಿದ್ದು, ವಿಜ್ಞಾನ ಸಂಶೋಧನೆಗೆ ಬಳಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.