ಜಮ್ಮು: 2019ರ ಇದೇ ದಿನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) 40 ಯೋಧರು ಹುತಾತ್ಮರಾಗಿದ್ದರು.

ಪಾಕಿಸ್ತಾನದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಸೂಸೈಡ್ ಬಾಂಬರ್, ಸ್ಫೋಟಕ ತುಂಬಿದ ವಾಹನವನ್ನು ಸೇನಾ ವಾಹನಕ್ಕೆ ಗುದ್ದಿಸಿ ವಿಧ್ವಂಸಕ ಕೃತ್ಯ ಎಸಗಿದ್ದ.

ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನಾಪಡೆಯು ಪಾಕಿಸ್ತಾನಕ್ಕೆ ನುಗ್ಗಿ ಬಾಲಾಕೋಟ್ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.

ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಹಲವರು ಗೌರವ ನಮನ ಅರ್ಪಿಸಿದ್ದಾರೆ.

‘ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಮ್ಮ ಧೈರ್ಯಶಾಲಿ ಹೀರೊಗಳಿಗೆ ನಮನ ಸಲ್ಲಿಸುತ್ತೇನೆ. ದೇಶಕ್ಕೆ ಅವರು ಮಾಡಿರುವ ಸೇವೆ ಮತ್ತು ತ್ಯಾಗವನ್ನು ಜನರು ಸದಾ ಸ್ಮರಿಸುತ್ತಾರೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಮೋದಿ ಹೇಳಿದ್ದಾರೆ.

‘2019ರ ಭಯೋತ್ಪಾದಕ ದಾಳಿಯಲ್ಲಿ ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರಿಗೆ ನನ್ನ ನಮನಗಳು. ಅವರ ಧೈರ್ಯ, ತ್ಯಾಗ, ನಿಸ್ವಾರ್ಥ ಸೇವೆಯಿಂದಾಗಿ ದೇಶವು ಅವರಿಗೆ ಸದಾ ಋಣಿಯಾಗಿರುತ್ತದೆ’ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.