ಭುಬನೇಶ್ವರ್: ಒಡಿಶಾದ ಜನ ಜೀವನ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ₹1, 550 ಕೋಟಿ ಮೌಲ್ಯದಹಲವಾರು ಅಭಿವೃದ್ಧಿ ಯೋಜನೆಗಳಿದೆ ಶಂಕು ಸ್ಥಾಪನೆ ಮಾಡಿದ್ದಾರೆ.

ಝರ್ಸಾಗುಡಾ- ವಿಝಿಯಾನಗರಂ ಮತ್ತು ಸಂಬಲ್‍ಪುರ್- ಅಂಗುಲ್ ರೈಲ್ವೆ ದಾರಿಯ ವಿದ್ಯುದೀಕರಣ ಮಾಡಿದ್ದನ್ನು ದೇಶಕ್ಕೆ ಸಮರ್ಪಿಸಿದ್ದಾರೆ ಮೋದಿ.ಈ ಯೋಜನೆಗಾಗಿ ₹1,085 ಕೋಟಿ ಖರ್ಚಾಗಿತ್ತು.
ಇದರ ಜತೆಗೆ181. 54 ಕಿಮೀ ಸಂಬಲ್‍ಪುರ್- ತಿತ್ಲಾಗರ್ ರೈಲ್ವೆ ಹಳಿ ದ್ವಿಪಥ ಯೋಜನೆ , 14.2ಕಿಮೀ ಬರ್ಪಲಿ- ದುಂಗರಿಪಲಿಯನ್ನು ದ್ವಿಪಥ ಮಾಡುವ ಮತ್ತು ಬಲಂಗೀರ್- ದೀಯೊಗಾಂವ್ ರೈಲ್ವೆ ಹಳಿ ಅಭಿವೃದ್ಧಿ ಯೋಜನೆಯನ್ನು ಉದ್ಧಾಟಿಸಿದ್ದಾರೆ.ಝರ್ಸಗುಡಾದಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಉದ್ಘಾಟನೆಯನ್ನೂ ಮೋದಿ ನೆರವೇರಿಸಿದ್ದಾರೆ.

ಇದನ್ನೂ ಓದಿ : ಒಡಿಶಾಗೆ ಪ್ರಧಾನಿ ಭೇಟಿ ಮುನ್ನ ಬಿತ್ತು 1,000 ಮರಗಳಿಗೆ ಕತ್ತರಿ!

₹115 ಕೋಟಿ ಖರ್ಚು ಮಾಡಿ ನಿರ್ಮಿಸಿದ 135 ಕಿಮೀ ಉದ್ದದ ಬಲಂಗೀರ್ - ಬಿಚ್ಚುಪಲಿ ರೈಲ್ವೆ ಹಳಿಯ ಉದ್ಘಾಟನೆಯನ್ನು ಮೋದಿ ನೆರವೇರಿಸಿದ್ದಾರೆ.

ಈ ದಾರಿಯಾಗಿ ಹೊಸ ರೈಲು ಸಂಚಾರಕ್ಕೆ ಮೋದಿ ಹಸಿರು ನಿಶಾನೆ ತೋರಿಸಿದ್ದು, ಈ ರೈಲು ಬಿಚ್ಚುಪಲಿ - ಝರ್ಸಾಗುಡ ಮತ್ತು ಬಲಂಗೀರ್ ಮೂಲಕ ಮಿಝಿಯಾನಗರಂ ಸಂಪರ್ಕ ಹೊಂದಲಿದೆ.

ನೀಲಮಾಧವ್ ಮತ್ತು ಸಿದ್ದೇಶ್ವರ ದೇಗುಲಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಿದ ಮೋದಿ, ಜಗತ್‍ಸಿಂಗ್ ಪುರ್, ಪುರಿ, ಫುಲ್‍ಬನಿ, ಬರ್ಗಾ ಮತ್ತು ಬಲಂಗೀರ್‌ನಲ್ಲಿ 6 ಪಾಸ್‍ಪೋರ್ಟ್ ಸೇವಾ ಕೇಂದ್ರಗಳನ್ನು ಉದ್ಘಾಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.